ವೈದ್ಯಕೀಯ, ರಕ್ತದಾನ ಉಚಿತ ಶಿಬಿರ

New Project (20)
Published on

ಮೂಡುಬಿದಿರೆ: ರಕ್ತದಾನ ಶ್ರೇಷ್ಠ ದಾನ. ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸವಾಗಿದ್ದು, ಪ್ರತಿಯೊಬ್ಬರು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಆಳ್ವಾಸ್ ಹೆಲ್ತ್ ಸೆಂಟರ್‌ನ ಡಾ.ವಿನಯ್ ಆಳ್ವ ಹೇಳಿದರು.

ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ನಾರಾಯಣ ಗುರು ಸೇವಾದಳ ಮತ್ತು ನಾರಾಯಣ ಗುರು ಮಹಿಳಾ ಘಟಕದ ಅಮೃತ ಮಹೋತ್ಸವ ಸಂಭ್ರಮ ಪ್ರಯುಕ್ತ ಆಳ್ವಾಸ್ ಹೆಲ್ತ್ ಸೆಂಟರ್ ಸಹಯೋಗದಲ್ಲಿ ಅಮೃತ ಸಭಾಭವನದಲ್ಲಿ ನಡೆದ ವೈದ್ಯಕೀಯ, ರಕ್ತದಾನ ಉಚಿತ ಶಿಬಿರದಲ್ಲಿ ಮಾತನಾಡಿದರು.

ಭಾನುಮತಿ ಶೀನಪ್ಪ ಶಿಬಿರ ಉದ್ಘಾಟಿಸಿದರು. ಸಂಘ ಅಧ್ಯಕ್ಷ, ವಕೀಲ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆ ವಹಿಸಿದರು.

ಮಾಜಿ ಅಧ್ಯಕ್ಷ ಪದ್ಮಯ್ಯ ಬಿ.ಸುವರ್ಣ, ವಕೀಲ ಎಂ.ಎಸ್.ಕೋಟ್ಯಾನ್, ದೇವರಾಜ್ ಸುವರ್ಣ ಪೊಸಲಾಯಿ ಮೂಡುಮಾರ್ನಾಡು, ಪ್ರಗತಿಪರ ಕೃಷಿಕರಾದ ಶಿವ ಎಲ್.ಪೂಜಾರಿ ಹೊಸ್ಮಾರು, ವಂದೇ ಮಾತರಂ ಸಹಕಾರಿ ಸಂಘದ ಸಿಇಒ ರಮೇಶ್ಚಂದ್ರ ಪಿ., ಸೇವಾದಳದ ಮಾಜಿ ಅಧ್ಯಕ್ಷ ಚಂದ್ರ ಕೆ.ಎಚ್., ಮಹಿಳಾ ಘಟಕ ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಪ್ರಜ್ವಲ್ ಮಾರ್ನಾಡ್ ನಿರೂಪಿಸಿದರು. ಶ್ರೀರಾಜ್ ಸನಿಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net