ವಿದ್ಯಾರ್ಥಿಗಳ ಜೀವನಕ್ಕೆ ದಾನಿಗಳ ಕೊಡುಗೆ ಪ್ರೇರಣೆಯಾಗಲಿ

sid
Published on

ಗೋಳಿಯಂಗಡಿ: ಚಿಕ್ಕಂದಿನಿಂದ ನಾವು ಬೆಳೆದು ಬಂದ ದಾರಿ ಮತ್ತು ಅವುಗಳಿಂದ ಕಲಿತ ಪಾಠ ಸವಾಜಕ್ಕೆ ಪ್ರಸ್ತುತವಾಗಿದೆ. ವಿದ್ಯಾರ್ಥಿಗಳು ದಾನಿಗಳಿಂದ ಪಡೆದ ಕೊಡುಗೆಗಳನ್ನು ಸದುಪಯೋಗದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಂಡು ಸವಾಜಕ್ಕೆ ಕೊಡುಗೆಗಳನ್ನು ನೀಡುವ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಉದ್ಯಮಿ ಮುರಳೀಧರ ಶೆಟ್ಟಿ ಹೇಳಿದರು.

ಹೆಸ್ಕುಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹೈಕಾಡಿ ಸ್ಮಾರ್ಟ್ ಕ್ರಿಯೇಷನ್ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಕೊಡಮಾಡಿದ ನೋಟ್ ಪುಸ್ತಕ, ಐಡಿ ಕಾರ್ಡ್, ಬೆಲ್ಟ್ ಮತ್ತು ಕಲಿಕೋಪಕರಣಗಳ ಉಚಿತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಂಕರನಾರಾಯಣ ಪೊಲೀಸ್ ಠಾಣೆ ಎಎಸ್‌ಐ ಜನಾರ್ದನ ಜೋಗಿ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು, ಪ್ರಸ್ತುತ ಸವಾಜದಲ್ಲಿ ಮಕ್ಕಳ ಜವಾಬ್ದಾರಿ ಮತ್ತು ಮಕ್ಕಳ ಸಹಾಯವಾಣಿಯ ಬಗ್ಗೆ ತಿಳಿಸಿದರು.

ಹೈಕಾಡಿ ಸ್ಮಾರ್ಟ್ ಕ್ರಿಯೇಷನ್ ಅಧ್ಯಕ್ಷ ಕೃಷ್ಣಮೂರ್ತಿ ಹೈಕಾಡಿ, ಸಿಆರ್‌ಪಿ ಪ್ರತಿಭಾ, ಎಸ್‌ಡಿಎಂಸಿ ಅಧ್ಯಕ್ಷ ರಾಜ ನಾಯ್ಕ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಟ್ರಸ್ಟ್ ಸದಸ್ಯೆ ಕೌಸಲ್ಯ, ಮುಖ್ಯಶಿಕ್ಷಕಿ ವಿನೋದಾ, ಸಹ ಶಿಕ್ಷಕಿಯರಾದ ಶಾಂತಿ, ಚೈತ್ರಾ, ಸುಗುಣ, ವಿದ್ಯಾರ್ಥಿ ನಾಯಕ ಭಾರ್ಗವ ಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ವಚನ ಸ್ವಾಗತಿಸಿದರು. ಎನ್.ಜೀವನ್ ವಂದಿಸಿದರು. ಸೃಜನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net