

ವಿಜಯವಾಣಿ ಸುದ್ದಿಜಾಲ ಬೈಂದೂರು
ಸಹಕಾರಿ ಸಂಸ್ಥೆಗಳು ಲಾಭದ ದೃಷ್ಟಿಕೋನ ಇಟ್ಟುಕೊಂಡು ಕಾರ್ಯನಿರ್ವಹಿಸುವ ಬದಲು ಜನರಿಗಾಗಿ ಸಹಕಾರ ಎಂಬ ಧ್ಯೇಯೋದ್ದೇಶದಿಂದ ಕಾರ್ಯ ನಿರ್ವಹಿಸಬೇಕು. ಆಗ ಸವಾಜದ ಕಟ್ಟಕಡೆಯ ಜನರಿಗೆ ಸಹಕಾರ ಚಳುವಳಿಯ ಪ್ರಯೋಜನ ದೊರೆಯಲು ಸಾಧ್ಯವಾಗುತ್ತದೆ ಎಂದು ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್.ಸಚ್ಚಿದಾನಂದ ಚಾತ್ರ ಹೇಳಿದರು.
ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸಿದ್ದಾಪುರದ ನಾಲ್ಕನೇ ಶಾಖೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ನಿಷ್ಠಾವಂತ ಸದಸ್ಯರ ಸಹಕಾರ, ನಿಸ್ವಾರ್ಥ ಮತ್ತು ಆದರ್ಶ ಆಡಳಿತ ಮಂಡಳಿ ಹಾಗೂ ನಗು ಮೊಗದ ಸೇವೆ ನೀಡುವ ಸಿಬ್ಬಂದಿಯಿಂದ ಸಂಸ್ಥೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಿದೆ. ಶೈಕ್ಷಣಿಕ ಹಾಗೂ ಸಾವಾಜಿಕ ಸೇವೆ ನೀಡುತ್ತಿರುವ ಗೋವಿಂದ ಬಾಬು ಪೂಜಾರಿ ಸಹಕಾರಿ ಸಂಸ್ಥೆ ಮೂಲಕ ಜನಸಾವಾನ್ಯರ ಕಷ್ಟಗಳಿಗೆ ಶ್ರಮಿಸುತ್ತಿರುವುದು ಶ್ಲಾನೀಯ ಎಂದರು.
ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಟ್ಟಡದ ವಾಲೀಕ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಲತಾ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಪೂಜಾರಿ, ಹಿರಿಯ ಸಹಕಾರಿಗಳಾದ ಬಾಲಚಂದ್ರ ಭಟ್, ರಾಜೇಶ್ ಹೆಬ್ಬಾರ್, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಲಿಂಗ ನಾಯ್ಕ, ಜಿ.ಪಂ. ವಾಜಿ ಸದಸ್ಯ ರೋಹಿತ್ ಕುವಾರ್ ಶೆಟ್ಟಿ, ಗೀತಾಂಜಲಿ ಸುವರ್ಣ, ಜಿಲ್ಲಾ ಸೌಹಾರ್ದ ಒಕ್ಕೂಟ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಳ್ಳೂರು 74 ಗ್ರಾ.ಪಂ. ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಟ್ಟಿನ್ಬೈಲು, ಉದ್ಯಮಿಗಳಾದ ಉಮೇಶ್ ರಾವ್, ನಾಗು ಕುಲಾಲ್, ಶ್ರೀಕಾಂತ್ ನಾಯಕ್, ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷ ಜಯರಾಮ್ ಶೆಟ್ಟಿ, ಸಿಇಒ ಸುಧಾಕರ ಪೂಜಾರಿ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ್ ಯಡ್ತರೆ ಕಾರ್ಯಕ್ರಮ ನಿರ್ವಹಿಸಿದರು. ಅಂಬರೀಶ್ ವಂದಿಸಿದರು.
ದೇವರು ಅವಕಾಶ ನೀಡಿದಾಗ ಕೈಲಾದಷ್ಟು ಜನಸೇವೆ ವಾಡುವುದು ನಮ್ಮ ಭಾಗ್ಯವೆಂದು ತಿಳಿದು ವಿದ್ಯೆ, ಉದ್ಯೋಗ ಹಾಗೂ ಆರ್ಥಿಕ ಕ್ಷೇತ್ರಕ್ಕೆ ಸದೃಢತೆ ನೀಡುವ ಪ್ರಯತ್ನ ವಾಡುತಿದ್ದೇನೆ. ಶ್ರೀ ವರಲಕ್ಷ್ಮೀ ಟ್ರಸ್ಟ್ ಮೂಲಕವೂ ನಿರಂತರ ಸವಾಜಮುಖಿ ಕೆಲಸ ನಡೆಯುತ್ತಿದೆ.
-ಡಾ.ಗೋವಿಂದ ಬಾಬು ಪೂಜಾರಿ, ಸಂಸ್ಥೆ ಅಧ್ಯಕ್ಷ