ದೈಹಿಕವಾಗಿ ಸದೃಢವಾಗಿರಲು ಸಹಕಾರಿ

hbr (3)
Published on

ಹೆಬ್ರಿ: ಯೋಗ ಭಾರತದ ಬಹಳ ಪ್ರಾಚೀನವಾದ ಕೊಡುಗೆಯಾಗಿದೆ. ನಿತ್ಯ ಯೋಗ ವಾಡುವುದರಿಂದ ನಾವು ದೈಹಿಕವಾಗಿ ಸದೃಢವಾಗುವುತ್ತೇವೆ. ನಿತ್ಯ ಯೋಗ ವಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಎಂದು ಬ್ರಹ್ಮಾವರ ವಿವೇಕ ಯೋಗ ಕೇಂದ್ರದ ಯೋಗ ಗುರು ಮೋಹನ್ ಕುವಾರ್ ಕುಂಬಳೇಕರ್ ಹೇಳಿದರು.

ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯೋಗ ತರಬೇತುದಾರರಾದ ಭಾರತಿ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷತೆ ನಡೆಸಿಕೊಟ್ಟರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ಟ್ರಸ್ಟ್ ವಿಶ್ವಸ್ಥ ಬಾಲಕೃಷ್ಣ ಮಲ್ಯ, ಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು.

ಉಪನ್ಯಾಸಕ ವೀಣೇಶ್ ಅಮೀನ್, ಚಂದ್ರಕಲಾ ನಿರೂಪಿಸಿದರು. ಸಂಖ್ಯಾಶಾಸ ಉಪನ್ಯಾಸಕ ಚಂದ್ರಹಾಸ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net