ಇಂಡಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ 5ನೇ ವರ್ಷದ ವರ್ಷಾಚರಣೆ ನಿಮಿತ್ತ ಜಾಗೃತಿ ಜಾಥಾ ಸೋಮವಾರ ನಡೆಯಿತು.
ಆಸ್ಪತ್ರೆಯ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಆರೋಗ್ಯ ಮಿತ್ರ ಶಿವಾಜಿ ಮಾನೆ ಮಾತನಾಡಿ, ದೇಶದಲ್ಲಿ ಶೇ.70 ಕ್ಕಿಂತ ಹೆಚ್ಚು ಜನರಿಗೆ ಯಾವುದೇ ಆರೋಗ್ಯ ಸುರಕ್ಷಾ ಇರುವುದಿಲ್ಲ.
ಸಾಮಾನ್ಯ ಜನರಿಗೆ ಗಂಭೀರ ಕಾಯಿಲೆಗಳು ಬಂದಾಗ ಅವರ ಜೀವಮಾನದ ಉಳಿತಾಯವನ್ನೆಲ್ಲ ಚಿಕಿತ್ಸೆಗೆ ಭರಿಸಬೇಕಾಗಬಹುದು ಅಥವಾ ಸಾಲ, ಆಸ್ತಿ ಮಾರಾಟ ಮಾಡಬೇಕಾದ ಪ್ರಸಂಗ ಬರಬಹುದು.
ಆದ್ದರಿಂದ ಆಯುಷ್ಮಾನ್ ಭಾರತ್ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ 2018ರಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ -ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳಿಸಿದೆ.
ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ 10 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ಅಂದರೆ 50 ಕೋಟಿಗಿಂತಲೂ ಹೆಚ್ಚು ಜನರಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ರೋಗಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಕರ್ನಾಟಕದಲ್ಲಿ 2018ರ ಜೂನ್ ತಿಂಗಳಿನಿಂದ ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಹ ಅನುಷ್ಠಾನ ಮಾಡಿದೆ.
ಇದನ್ನೂ ಓದಿ: ಕೌಶಲಗಳ ಅಭಿವೃದ್ಧಿಗೆ ಮಹತ್ವ ನೀಡಿ
ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.
ಈ ಯೋಜನೆ ಅಡಿಯಲ್ಲಿ ಅಂದಾಜು 1,650 ವಿವಿಧ ತೆರನಾದ ರೋಗಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು.
ಪ್ರತಿ ಚಿಕಿತ್ಸೆಗೆ ಪ್ರೊಸೀಜರ್ ನೇಮ್ ಮತ್ತು ಪ್ರೊಸೀಜರ್ ಕೋಡ್ ನೀಡಲಾಗಿದೆ.
ಪ್ರತೀ ಚಿಕಿತ್ಸೆಗೆ/ ಪ್ರೊಸೀಜರ್‌ಗೆ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನಂತರ ಆ ಚಿಕಿತ್ಸೆಗೆ ನಿಗದಿಪಡಿಸಿದ ಪ್ಯಾಕೇಜ್ ಹಣವನ್ನು ಸರ್ಕಾರ ನೇರವಾಗಿ ಚಿಕಿತ್ಸೆ ನೀಡಿದ ಆಸ್ಪತ್ರೆಗೆ ನೀಡುತ್ತದೆ.
ರೋಗಿಯು ಚಿಕಿತ್ಸೆ ಪಡೆದ ನೋಂದಾಯಿತ ಆಸ್ಪತ್ರೆಗಳಲ್ಲಿ ಹಣ ನೀಡುವ ಅಗತ್ಯ ಇರುವುದಿಲ್ಲ. ಲಾನುಭವಿಗಳಿಗೆ ಚಿಕಿತ್ಸೆ ವೆಚ್ಚ, ಔಷಧ ವೆಚ್ಚ, ಪರೀಕ್ಷೆಗಳು ಮತ್ತು ಊಟ, ಪ್ರಯಾಣ ಭತ್ಯೆಯನ್ನು ನೀಡಲಾಗುವುದು.
ಇದು ನಗದುರಹಿತ ಸೇವೆಯಾಗಿರುತ್ತದೆ ಎಂದರು. ವಿವಿಧ ತೆರನಾದ ರೋಗಗಳಿಗೆ ವಿವಿಧ ಸ್ತರಗಳಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ನೀಡುವ ಉದ್ದೇಶದಿಂದ ಮತ್ತು ರೆರಲ್ ನೀಡಲು ಅನುಕೂಲವಾಗಲೆಂದು ಚಿಕಿತ್ಸೆಗಳನ್ನು 5 ಹಂತಗಳಾಗಿ ವಿಂಗಡಿಸಲಾಗಿದೆ ಎಂದರು.
ಡಾ.ಅಮಿತ್ ಕೊಳೇಕರ್, ಡಾ. ವಿಲ ಕೊಳೇಕರ್, ಡಾ. ಸಂತೋಷ ಪವಾರ, ಡಾ. ವಿಕಾಸ ಸಿಂದಗಿ, ಡಾ. ಪ್ರೀತಿ ಕೊಳೇಕರ್, ಡಾ. ರಾಜೇಶ್ ಕೊಳೇಕರ್, ಡಾ. ರವಿ ಭತಗುಣಿಕಿ, ಡಾ. ಜಗದೀಶ ಬಿರಾದಾರ, ಸಿಬ್ಬಂದಿ ಗುರುರಾಜ ಪಾಟೀಲ, ಚಿದಾನಂದ ಅರಗೆ, ಶ್ರೀಮಂತ ತೋಳನೂರ, ಬಸವರಾಜ ಡವಳಗಿ, ವಿಠ್ಠಲ ಬಡಿಗೇರ, ಅಶೋಕ ಮದರ, ರೇಷ್ಮಾ ಮುಲ್ಲಾ, ಕಸ್ತೂರಿ ಅಳ್ಳಗಿ, ಅರವಿಂದ ವಟಾರ, ಪುಟ್ಟು ಮೇಡೆದಾರ, ಮರಿಯಪ್ಪ ದೊಡ್ಡಮನಿ, ಸಂಜೀವ ಬಡಿಗರ್, ರಾಕೇಶ ಮೇಲಿನಮನಿ ಇತರರಿದ್ದರು.