More

    ಗಾಲ್ಫ್​ ಕಾರ್ಟ್​ನಿಂದ ಬಿದ್ದು ಗಾಯಗೊಂಡ ಮ್ಯಾಕ್ಸ್​ವೆಲ್​; ಪ್ರಮುಖ ಪಂದ್ಯಕ್ಕೆ ಮಿಸ್​!

    ಅಹಮದಾಬಾದ್​: ಆಸ್ಟ್ರೆಲಿಯಾದ ಆಲ್ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​ ಗಾಲ್ಫ್​ ಕಾರ್ಟ್​ನಿಂದ ಬಿದ್ದು ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ನವೆಂಬರ್​ 4ರಂದು ನಡೆಯಲಿರುವ ಆಸ್ಟ್ರೇಲಿಯಾದ ಸಾಂಪ್ರದಾಯಿಕ ಎದುರಾಳಿ ಹಾಗೂ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

    ಕ್ಲಬ್​ಹೌಸ್​ ಒಂದಕ್ಕೆ ತೆರಳಿದ್ದ ಮ್ಯಾಕ್ಸ್​ವೆಲ್​, ಗಾಲ್ಫ್​ ಕಾರ್ಟ್​ ಹಿಂಬದಿಯಲ್ಲಿ ಕುಳಿತು ಟೀಮ್​ ಬಸ್​ನತ್ತ ಮರಳಿ ಬರುವಾಗ ಬಿದ್ದಿದ್ದು, ಕೆಲ ತರಚಿದ ಗಾಯಗಳಾಗಿವೆ. ಜತೆಗೆ ಅವರ ತಲೆಗೂ ಪೆಟ್ಟಾಗಿರುವುದರಿಂದ, ಕನ್​ಕಷನ್​ ನಿಯಮದನ್ವಯ ಅವರು ಇನ್ನು ಕೆಲ ದಿನ ವೈದ್ಯರ ಮೇಲ್ವಿಚಾರಣೆಯಲ್ಲಿರಬೇಕಿದೆ. ಈಗಾಗಲೆ ಸ್ಪಿನ್ನರ್ಸ್​ ಕೊರತೆ ಹೊಂದಿರುವ ಆಸೀಸ್​ಗೆ ಮ್ಯಾಕ್ಸಿ ಗೈರು ಹಿನ್ನಡೆ ಎನಿಸಿದೆ.

    ಆಶ್ಟನ್​ ಅಗರ್​ ಗಾಯದಿಂದಾಗಿ ವಿಶ್ವಕಪ್​ನಿಂದ ಹೊರಬಿದ್ದ ಬಳಿಕ ಮತ್ತೋರ್ವ ಸ್ಪಿನ್ನರ್​ ಬದಲು ಮಾರ್ನಸ್​ ಲಬುಶೇನ್​ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಆಸೀಸ್​​, ಆಡಂ ಜಂಪಾಗೆ ಸಮರ್ಥ ಸ್ಪಿನ್​ ಜತೆಗಾರರಿಲ್ಲದೆ ಪರದಾಡಿತ್ತು. ಅರೆಕಾಲಿಕ ಸ್ಪಿನ್ನರ್​ ಆಗಿ ಮ್ಯಾಕ್ಸ್​ವೆಲ್​ ಒಬ್ಬರೇ ಸದ್ಯ ಜಂಪಾಗೆ ಒಂದಿಷ್ಟು ಬೆಂಬಲ ಒದಗಿಸುತ್ತ ಬಂದಿದ್ದರು. ಆಸೀಸ್​ ವೇಗಿಗಳಿಗಿಂತ ಆಡಂ ಜಂಪಾ ಅವರೇ ಸದ್ಯ ವಿಶ್ವಕಪ್​ನಲ್ಲಿ 16 ವಿಕೆಟ್​ ಕಬಳಿಸಿ ಮುಂಚೂಣಿಯಲ್ಲಿದ್ದಾರೆ.

    ಮ್ಯಾಕ್ಸ್​ವೆಲ್​ ಇತ್ತೀಚೆಗಿನ ದಿನಗಳಲ್ಲಿ 2ನೇ ಬಾರಿಗೆ ಈ ರೀತಿ, ಕ್ರಿಕೆಟ್​ ಮೈದಾನದಿಂದ ಹೊರಗೆ ಆಕಸ್ಮಿಕ ಗಾಯಕ್ಕೀಡಾಗಿದ್ದಾರೆ. ಕಳೆದ ನವೆಂಬರ್​ನಲ್ಲಿ ಅವರು ಮೆಲ್ಬೋರ್ನ್​ನಲ್ಲಿ ಬರ್ತ್​ಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡಿದ್ದರು. ನಂತರ ಅವರು ಫಿಟ್​ ಆಗಿ 2023ರ ಐಪಿಎಲ್​ ವೇಳೆಗೆ ಮರಳಿ ಕಣಕ್ಕಿಳಿದಿದ್ದರು. ಇದೀಗ ವಿಶ್ವಕಪ್​ನಲ್ಲಿ ಕಿವೀಸ್ ವಿರುದ್ಧದ ಪಂದ್ಯದ ಬಳಿಕ ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೆ ಮುನ್ನ 1 ವಾರದ ಬಿಡುವು ಇದ್ದ ಕಾರಣ ಆಸೀಸ್​ ಆಟಗಾರರು ಗಾಲ್ಫ್​ ಆಡಲು ತೆರಳಿದ್ದಾಗ ಮ್ಯಾಕ್ಸ್​ವೆಲ್​ ಬಿದ್ದು ಮತ್ತೆ ಗಾಯಮಾಡಿಕೊಂಡಿದ್ದಾರೆ.

    ರಾಷ್ಟ್ರೀಯ ಕ್ರೀಡಾಕೂಟದ ಈಜುಕೊಳದಲ್ಲಿ ಚಿನ್ನದ ಪದಕ ಗೆದ್ದು ಮಿಂಚಿದ ಪತಿ-ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts