More

    ವಿಶ್ವಕಪ್​ಗೆ ಆಸೀಸ್​ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್​ ಪುತ್ರಿ ಟಿವಿ ನಿರೂಪಕಿ!

    ಬೆಂಗಳೂರು: ಆಸ್ಟ್ರೆಲಿಯಾದ ಮಾಜಿ ಬ್ಯಾಟ್ಸ್​ಮನ್​ ಮ್ಯಾಥ್ಯೂ ಹೇಡನ್​ ಅವರ ಪುತ್ರಿ ಗ್ರೇಸ್​ ಹೇಡನ್​ ಏಕದಿನ ವಿಶ್ವಕಪ್​ ವೇಳೆ ಟಿವಿ ನಿರೂಪಕಿಯಾಗಿ ಹೊಸ ವೃತ್ತೀಜಿವನ ಆರಂಭಿಸಲಿದ್ದಾರೆ. ಮ್ಯಾಥ್ಯೂ ಹೇಡನ್​ ನಿವೃತ್ತಿಯ ನಂತರ ಈಗಾಗಲೆ ವೀಕ್ಷಕವಿವರಣೆಕಾರರಾಗಿ ಜನಪ್ರಿಯರಾಗಿದ್ದರೆ, ಈಗ 21 ವರ್ಷದ ಗ್ರೇಸ್​ ಕೂಡ “ಸ್ಟಾರ್​ ಸ್ಪೋರ್ಟ್ಸ್​’ ವಾಹಿನಿಯಲ್ಲಿ ಕಾರ್ಯನಿರ್ವಹಿಸಲು ಭಾರತಕ್ಕೆ ಆಗಮಿಸಿದ್ದಾರೆ.

    ಭಾರತದ ಜನಪ್ರಿಯ ಟಿವಿ ನಿರೂಪಕಿ ಮಯಾಂತಿ ಲ್ಯಾಂಗರ್​ಗೆ ಗ್ರೇಸ್​ ಹೇಡನ್​ ಸಾಥ್​ ನೀಡಲಿದ್ದಾರೆ. ಇತ್ತೀಚೆಗೆ ಚೆನ್ನೈ ಬೀಚ್​ಗೆ ಭೇಟಿ ನೀಡಿದ್ದ ಗ್ರೇಸ್​ ಹೇಡನ್​ ಬಳಿಕ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. “ನನ್ನ ತಂದೆಗೆ ಭಾರತವೆಂದರೆ ಬಹಳ ಇಷ್ಟ. ಅದೇ ರೀತಿ ನಾನೂ ಅವರೊಂದಿಗೆ ಭಾರತಕ್ಕೆ ಭೇಟಿ ನೀಡುವ ಸಮಯವನ್ನು ಆನಂದಿಸುತ್ತೇನೆ’ ಎಂದು ಗ್ರೇಸ್​ ಹೇಳಿಕೊಂಡಿದ್ದಾರೆ.

    ಡಿಸ್ನಿ+ಹಾಟ್​ಸ್ಟಾರ್​ನಲ್ಲಿ ಈ ಬಾರಿ ಕನ್ನಡ ಸಹಿತ ಒಟ್ಟು 9 ಭಾಷೆಗಳಲ್ಲಿ ವೀಕ್ಷಕವಿವರಣೆ ಪ್ರಸಾರವಾಗಲಿದ್ದು, ಒಟ್ಟು 120 ವೀಕ್ಷಕ ವಿವರಣೆಕಾರರು ವಿಶ್ವಕಪ್​ ವೇಳೆ ಕಾರ್ಯನಿರ್ವಹಿಸಲಿದ್ದಾರೆ.

    VIDEO: ಇಶ್​ ಸೋಧಿ ರನೌಟ್​ ಮಾಡಿ ವಾಪಸ್​ ಕರೆದ ಬಾಂಗ್ಲಾ; ಹೃದಯ ಗೆದ್ದ ಕ್ರೀಡಾಸ್ಫೂರ್ತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts