

ಕಿನ್ನಿಗೋಳಿ: ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ, ಐಕಳ ಮತ್ತು ಮುಂಬೈ ಮತ್ತು ಕಾಂತಾಬಾರೆ ಬೂದಾಬಾರೆ ಫ್ರೆಂಡ್ಸ್ ಕ್ಲಬ್ ಆಶ್ರಯದಲ್ಲಿ ಹೊನಲು ಬೆಳಕಿನ ಪುರುಷರ ಮುಕ್ತ 65 ಕೆ.ಜಿ. ವಿಭಾಗದ ಮ್ಯಾಟ್‌ಕಬಡ್ಡಿ ಪಂದ್ಯಾಟ ಜ.11ರ ಸಂಜೆ 6.30ರಿಂದ ಐಕಳ ಬಾವ ಧರ್ಮಚಾವಡಿಯ ಮುಂಭಾಗದ ಮೈದಾನದಲ್ಲಿ ನಡೆಯಲಿದೆ ಎಂದು ಐಕಳ ಕಾಂತಾಬಾರೆ ಬೂದಾಬಾರೆ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಜೆ 7ಕ್ಕೆ ಕಬಡ್ಡಿ ಪಂದ್ಯಾಟ ಪ್ರಾರಂಭವಾಗಲಿದ್ದು, ಈಗಾಗಲೇ 16 ತಂಡಗಳು ನೋಂದಾಯಿಸಿದ್ದು, ವಿಜೇತ ತಂಡಗಳಿಗೆ ನಗದು ಹಾಗೂ ಟ್ರೋಫಿ ಸಿಗಲಿದೆ. ಪ್ರತೀ ತಂಡಕ್ಕೆ 1000 ರೂ. ನೋಂದಣಿ ಶುಲ್ಕವಿದ್ದು, ಭಾಗವಹಿಸಿದ ಪ್ರತೀ ತಂಡಕ್ಕೆ ತಲಾ 2,000 ರೂ.ನೀಡಲಾಗುವುದು ಎಂದರು.
ಪಂದ್ಯಾಟವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಕ್ರೀಡಾಂಗಣವನ್ನು ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ ಉದ್ಘಾಟಿಸಲಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಕೇಶ್ ಮಲ್ಲಿ, ಐಕಳ ಗ್ರಾಪಂ ಅಧ್ಯಕ್ಷ ದಿವಾಕರ ಚೌಟ, ಉದ್ಯಮಿ ಎಲಿಯಾಸ್ ಸ್ಯಾಂಕ್ಟಿಸ್, ಮುಂಬೈ ಕಂಬಳ ಸಮಿತಿ ಅಧ್ಯಕ್ಷ ಕುಶಾಲ್ ಭಂಡಾರಿ ಐಕಳ ಬಾವ, ಕೋಶಾಧಿಕಾರಿ ವೇಣುಗೋಪಾಲ್ ಶೆಟ್ಟಿ, ಐಕಳ ಬಾವ, ಜೆಪ್ಪು ಬಂಟರ ಸಂದ ಅಧ್ಯಕ್ಷ ವಸಂತ ಶೆಟ್ಟಿ, ಉದ್ಯಮಿ ದೀಕ್ಷಿತ್ ಶೆಟ್ಟಿ ಎರ್ಮಾಳ್, ಕಿರಣ್ ಶೆಟ್ಟಿ ಕೊಡೆತ್ತೂರು ಹೊಸಮನೆ ಉಪಸ್ಥಿತರಿರುವರು. ಮಹಾರಾಷ್ಟ್ರ ಸರ್ಕಾರದ ಶಿವ ಛತ್ರಪತಿ ಪುರಸ್ಕೃತ ಜಯ ಎ.ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಜ.12ರಂದು ಬೆಳಗ್ಗೆ 7ಕ್ಕೆ ಸಮಾರೋಪದಲ್ಲಿ ಎಳತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಪ್ರಮುಖರಾದ ಚಿತ್ರರಂಜನ್ ಭಂಡಾರಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ದಯಾನಂದ ಶೆಟ್ಟಿ, ಐಕಳ ಬಾವ, ಸ್ವರಾಜ್ ಶೆಟ್ಟಿ, ಮುಂಡ್ಕೂರು ದೊಡ್ಡಮನೆ, ಸಾಯಿನಾಥ ಶೆಟ್ಟಿ ಮುಂಡ್ಕೂರು, ರವಿಚಂದ್ರ ಡಿ ಐಕಳ, ಸಂಜೀವ ಶೆಟ್ಟಿ ಸ್ಥಳಂತಗುತ್ತು, ಮುರಳೀಧರ ಶೆಟ್ಟಿ ಐಕಳ, ಲೋಕನಾಥ ಏಳಿಂಜೆ, ಶ್ರೀಶ ಸರಾಫ್ ಐಕಳ, ಸುಧಾಮ ಶೆಟ್ಟಿ, ಸದಾನಂದ, ಆನಂದ ಗೌಡ ಮತ್ತಿತರರಿದ್ದರು.