

ಗುರುಪುರ: ಯಕ್ಷಧ್ರುವ ಪಟ್ಲ ಫೌಂಡೇಶನ್ ಸರ್ಕಾರಿ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ, ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯ ಸೊಗಡು ಪಸರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಮತ್ತು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ಬುಧವಾರ ಗಂಜಿಮಠದ ಒಡ್ಡೂರು ಫಾರ್ಮ್ಸ್ನಲ್ಲಿ ಆಯೋಜಿಸಲಾದ ಯಕ್ಷಧ್ರುವ ಯಕ್ಷಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ರಂಗಪ್ರವೇಶ ಸಮಾರೋಪದಲ್ಲಿ ಮಾತನಾಡಿದರು.
ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲೆಯ ಉಳಿವಿಗಾಗಿ ಪಟ್ಲ ಫೌಂಡೇಶನ್ ಸಕಾರಾತ್ಮಕ ಕೆಲಸ ವಾಡುತ್ತಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಧಾರ್ಮಿಕ, ಸಾವಾಜಿಕ, ಶೈಕ್ಷಣಿಕ ಮತ್ತು ಕಲಾ ಕ್ಷೇತ್ರದಲ್ಲಿ ಪಟ್ಲ ಫೌಂಡೇಶನ್ 15 ಕೋಟಿಗೂ ಅಧಿಕ ವ್ಯಯಿಸಿದೆ ಎಂದರು.
ಯಕ್ಷಧ್ರುವ ಪಟ್ಲ ಬಂಟ್ವಾಳ ಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಅಧ್ಯಕ್ಷತೆ ವಹಿಸಿದ್ದರು.
ಎಂಎಲ್ಸಿ ಡಾ.ಮಂಜುನಾಥ ಭಂಡಾರಿ, ಯಕ್ಷಧ್ರುವ-ಯಕ್ಷಶಿಕ್ಷಣದ ಪ್ರಧಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಸರಪಾಡಿ ಘಟಕದ ಅಧ್ಯಕ್ಷ ಶಶಿಕಾಂತ ಶೆಟ್ಟಿ ಸರಪಾಡಿ, ಸಲಹಾ ಸಮಿತಿ ಸದಸ್ಯ ಸರಪಾಡಿ ಅಶೋಕ್ ಶೆಟ್ಟಿ, ವಿಟ್ಲ ಘಟಕದ ರಾಧಾಕೃಷ್ಣ ಭಂಡಾರಿ ಚೆಲ್ಲಡ್ಕ, ಎಕ್ಕಾರು ಘಟಕದ ಗಿರೀಶ್ ಎಂ.ಶೆಟ್ಟಿ ಕಟೀಲು, ಉಪ್ಪಿನಂಗಡಿ ಘಟಕದ ಜಗದೀಶ ಶೆಟ್ಟಿ, ಸುರತ್ಕಲ್ ಘಟಕದ ಸುಧಾಕರ ಪೂಂಜ, ಮಂಗಳೂರು ಘಟಕದ ತಾರಾನಾಥ ಶೆಟ್ಟಿ ಬೋಳಾರ್, ಜಿಲ್ಲಾ ಶಿಕ್ಷಣಾಧಿಕಾರಿ ಲಕ್ಷ್ಮೀನಾರಾಯಣ, ಉದ್ಯಮಿ ಜಯರಾಮ ಶೇಖ, ಉದ್ಯಮಿ ರಾಜೀವ ಪೂಜಾರಿ ಕೈಕಂಬ, ಸಿಎ ಸುರೇಶ್ ಕುಮಾರ್ ರೈ, ಸಂತೋಷ್ ಶೆಟ್ಟಿ ಶೆಡ್ಡೆ ಮತ್ತಿತರರಿದ್ದರು.
ಪಟ್ಲ ಫೌಂಡೇಶನ್ನ ಪದಾಧಿಕಾರಿ ಪುರುಷೋತ್ತಮ ಭಂಡಾರಿ ಅಡ್ಯಾರು ಸ್ವಾಗತಿಸಿದರು. ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರಸ್ತಾವಿಸಿದರು. ವಾಸುದೇವ ಶೆಟ್ಟಿ ವಂದಿಸಿದರು.
ಎರಡು ವೇದಿಕೆಯಲ್ಲಿ ಪ್ರದರ್ಶನ
ಜಿಲ್ಲೆಯ 20 ಸರ್ಕಾರಿ ಶಾಲೆಗಳ 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬುಧವಾರ 2 ವೇದಿಕೆಗಳಲ್ಲಿ ‘ರಂಗ ಪ್ರವೇಶ’ ವಾಡಿರುವುದು ಒಂದು ಅಪೂರ್ವ ದಾಖಲೆ. ಎರಡೂ ವೇದಿಕೆಯಲ್ಲಿ ತಲಾ 10 ತಂಡಗಳು ವಿವಿಧ ಯಕ್ಷಗಾನ ಪ್ರಸಂಗಗಳಿಗೆ ಹೆಜ್ಜೆ ಹಾಕಿದರು.
ಶಿಕ್ಷಣ ಕ್ಷೇತ್ರದಲ್ಲಿ ಜಾನಪದ ಮತ್ತು ಕ್ರೀಡೆಗೆ ಆದ್ಯತೆ ನೀಡುವುದರಿಂದ ಮಕ್ಕಳಿಗೆ ಈ ನಾಡಿನ ಇತಿಹಾಸ ತಿಳಿಸಿದಂತಾಗುತ್ತದೆ. ಸರ್ಕಾರ ವಾಡಬೇಕಾದ ಕೆಲಸ ಟ್ರಸ್ಟ್ ವಾಡುತ್ತಿದೆ. ಮುಂದಿನ ಪೀಳಿಗೆಗೆ ಯಕ್ಷಗಾನ ಕೊಂಡೊಯ್ಯಬೇಕು. ಈ ನಿಟ್ಟಿನಲ್ಲಿ ಪಟ್ಲ ಸತೀಶ್ ಶೆಟ್ಟಿ ಪ್ರಯತ್ನ ಮೆಚ್ಚುವಂತಹದ್ದು. ಡಾ.ಮಂಜುನಾಥ ಭಂಡಾರಿ, ಎಂಎಲ್ಸಿ.