ಬಾಣಂತಿಯರ ಸಾವಿನ ಪ್ರಕರಣ; ಲೋಕಾಯುಕ್ತರ ಭೇಟಿ ಒಳ್ಳೇಯದ್ದು: ದಿನೇಶ್ ಗುಂಡೂರಾವ್|maternal death; Visit of Lokayukta is good

dinesh
Published on

ಬೆಂಗಳೂರು: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣದಲ್ಲಿ ಯಾವುದೇ ವಿಷಯ ಕೂಡ ಮುಚ್ಚಿ ಇಡುವುದಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಬಳ್ಳಾರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ಕೊಟ್ಟಿರುವುದು ಒಳ್ಳೆಯದು. ವ್ಯವಸ್ಥೆ ಸರಿ ಹೋಗಬೇಕು, ಸತ್ಯಾಂಶಹೊರ ಬರಬೇಕು ಎಂಬುದು ನಮ್ಮ ಉದ್ದೇಶವೂ ಆಗಿದೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಲ್ಲ ಹೇಳಿದ್ದೇವೆ. ನಮ್ಮ ಕಡೆಯಿಂದ ಕ್ರಮ ಕೂಡ ಆಗಿದೆ. ಯಾರೆಲ್ಲ ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗುವುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಅನೇಕ ಕ್ರಮ ತೆಗೆದುಕೊಂಡಿದ್ದೇವೆ. ಈಗ ಮುಂದೆ ಏನಾಗಬೇಕು ಎಂಬುದನ್ನು ಹಲವಾರು ಆಯಾಮಗಳಲ್ಲಿ ಯೋಚಿಸುತ್ತಿದ್ದೇವೆ ಎಂದು ತಿಳಿಸಿದರು.

ಐವಿ ಪೂರೈಕೆ ಕಂಪನಿ ವಿರುದ್ಧ ಯಾವ ರೀತಿ ಕ್ರಮ ಆಗಬೇಕು. ಬೇರೆ ಬೇರೆ ಲ್ಯಾಬ್ ವರದಿ ಕೊಟ್ಟಿದ್ದಾರೆ. ಅವರು ಹೇಗೆ ಕೊಟ್ಟರು ಎಂಬ ಮಾಹಿತಿ ಕೇಳುತ್ತೇವೆ. ನಮ್ಮ ಡ್ರಗ್ ಕಂಟ್ರೋಲ್ ಯಾವ ರೀತಿ ನಿರ್ವಹಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ತನಿಖೆ ಕೂಡ ನಡೆಯುತ್ತಿದೆ. ಅಭಿವೃದ್ಧಿ ಆಯುಕ್ತರ ವರದಿ ಕೊಡುತ್ತಾರೆ. ಅದನ್ನೂ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಇದರಲ್ಲಿ ಯಾವುದೇ ಮುಲಾಜೂ ಇಲ್ಲ ಎಂದು ಹೇಳಿದರು.

ಲೋಕಯುಕ್ತರು ಹೋಗೋದು ತಪ್ಪೇನಿಲ್ಲ

ನಮಗೆ ಪಾರದರ್ಶಕತೆ ಹೊಣೆಗಾರಿಕೆ ಇರಬೇಕು. ಸತ್ಯಾಂಶಗಳು ಹೊರ ಬರಬೇಕು. ಒಂದು ವಿಷಯ ಕೂಡ ಮುಚ್ವಿ ಹಾಕುವ ಪ್ರಮೇಯ ಇಲ್ಲ. ಲೋಕಯುಕ್ತರು ಬಳ್ಳಾರಿ ಆಸ್ಪತ್ರೆಗೆ ಹೋಗಿರೋದು ಒಳ್ಳೆಯದು. ಅವರು ಕೂಡ ನೋಡಿಕೊಂಡು ಬರಲಿ. ನಾವು ಮುಕ್ತವಾಗಿ ನೋಡುತ್ತಿದ್ದೇವೆ. ವ್ಯವಸ್ಥೆ ಸರಿ ಹೋಗಬೇಕು. ವ್ಯವಸ್ಥೆ ಸರಿ ಮಾಡದೇ ಇದ್ರೆ ಮುಂದೆ ಇದೇ ರೀತಿ ಆಗಲಿದೆ. ಅದಕ್ಕೆ ಅವಕಾಶ ಕೊಡಬಾರದು, ಆ ಕೆಲಸ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net