ಮಾತಾರಿಗುಡ್ಡೆಯಲ್ಲಿ ನೇಮೋತ್ಸವ

New Project (39)
Published on

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪರಿವಾರ ದೈವಗಳಾದ ಕಲ್ಕುಡ, ಕಲ್ಲುರ್ಟಿ, ವರ್ಣರ ಪಂಜುರ್ಲಿ ಹಾಗೂ ಧೂಮಾವತಿ ದೈವಗಳಿಗೆ ದೇವಾಲಯದ ಅಧೀನದ ಮಾತಾರಿಗುಡ್ಡೆಯಲ್ಲಿ ಶುಕ್ರವಾರ ನೇಮೋತ್ಸವ ನೆರವೇರಿತು. ರಂಗಪೂಜೆ ನಡೆದು ದೈವಗಳ ಭಂಡಾರವನ್ನು ಪಲ್ಲಕಿಯಲ್ಲಿ ಮಾತಾರಿಗುಡ್ಡೆಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಅನ್ನ ಸಂತರ್ಪಪಣೆ ಜರುಗಿ ದೈವಗಳಿಗೆ ನರ್ತನ ಸೇವೆ ಜರುಗಿತು.

ದೇವಳದ ಆಡಳಿತ ಮೊಕ್ತೇಸರ ನಡುಸಾರ ಉದಯಶಂಕರ ಭಟ್, ಪ್ರತಾಪ್ ಪೆರಿಯಡ್ಕ, ರಾಮಚಂದ್ರ ಮಣಿಯಾಣಿ, ನವೀನ್ ಕಲ್ಯಾಟೆ, ಸುರೇಶ್ ಅತ್ರಮಜಲು, ಸುನೀಲ್ ದಡ್ಡು, ಲಕ್ಷ್ಮಣ ನೆಡ್ಚಿಲು, ಉದಯ ಅತ್ರಮಜಲು, ಲೋಕೇಶ್ ಬೆತ್ತೋಡಿ, ಪ್ರಶಾಂತ್ ಪೆರಿಯಡ್ಕ, ರಾಧಾಕೃಷ್ಣ ಬೊಳ್ಳಾವು, ಪ್ರದೀಪ್ ಆಚಾರ್ಯ ಮೊದಲಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net