

ಬೆಳ್ತಂಗಡಿ: ಮುಗೇರಡ್ಕ ದೈವಸ್ಥಾನದ ವಾರ್ಷಿಕ ನೇಮೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಮಕರ ಸಂಕ್ರಮಣದಂದು ಗೊನೆ ಮಹೂರ್ತ ನಡೆದು ಕೋಳಿಗೂಟ, ಅಂತರ ಮತ್ತು ದೇವಸ್ಯ ಭಂಡಾರ ಮನೆಯಿಂದ ಮುಗೇರಡ್ಕ ಕ್ಷೇತ್ರಕ್ಕೆ ದೈವದ ಭಂಡಾರ ಆಗಮಿಸಿ ನಂತರ ಶಿರಾಡಿ ದೈವಕ್ಕೆ ಹೊಸದಾಗಿ ನಿರ್ಮಿಸಿದ ಹುಲಿಬಂಡಿ ಒಪ್ಪಿಸುವ ಕಾರ್ಯಕ್ರಮ ನಡೆಯಿತು.
ದೈವಂಕುಲು, ಬಿರ್ಮೆರ್, ಕುಮಾರ, ಗಿಳಿರಾಮ, ಬಸ್ತಿನಾಯ್ಕ ಇನ್ನಿತರ ಪರಿವಾರ ದೈವಗಳ ನೇಮ, ಕಲ್ಕುಡದೈವ ಪಿಲಿಚಾಮುಂಡಿ ದೈವ ಹಾಗೂ ಶಿರಾಡಿದೈವದ ಗಗ್ಗರ ಸೇವೆ, ದೈವದ ಸೇವೆಗಳು ನೆರವೇರಿತು.
ಸಂಸದ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಬೋಟ್ಯಾಡಿ, ಮಾಜಿ ಸದಸ್ಯ ಹರೀಶ್ ಕುಮಾರ್ ಬೆಳ್ತಂಗಡಿ, ಮಾಜಿ ಶಾಸಕ ಸಂಜೀವ ಮಠಂದೂರು, ಕಿರಣ್‌ಚಂದ್ರ ಪುಷ್ಪಗಿರಿ ಹಾಗೂ ದೈವಸ್ಥಾನ ಮತ್ತು ದೇವಸ್ಥಾನದ ಆಡಳಿತದಾರರು ಭಾಗವಹಿಸಿದ್ದರು.