

ಬೆಳ್ತಂಗಡಿ: ಎಸ್‌ಡಿಎಂ ಹಳೇ ವಿದ್ಯಾರ್ಥಿ ಅಜಿತ್ ಕುಮಾರ್ ಭಾರತದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿಯಲ್ಲಿ ಮಾಸ್ಟರ್ ಆಫ್ ಡಿಸೈನ್ ಪದವಿ ಪೂರ್ಣಗೊಳಿಸಿದ್ದಾರೆ. ಎಸ್.ಡಿ.ಎಂ ಪಾಲಿಟೆಕ್ನಿಕ್ ಉಜಿರೆಯಲ್ಲಿ 2016ರಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದು, 2018ರಲ್ಲಿ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಾಲ್ಕು ವರ್ಷ ಬೊರೋಸಿಲ್ ಡಿಸೈನ್ ಇಂಡಸ್ಟ್ರಿಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಇಂಡೋ ಎಐ ಸಂಸ್ಥೆ ದೆಹಲಿಯಲ್ಲಿ ಡಿಸೈನ್ ಹೆಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಸೈನ್ ವಿಭಾಗದಲ್ಲಿ ಎಕ್ಸ್‌ಪ್ರೋ 201 ಅವಾರ್ಡ್, ವಾರಣಾಸಿ ಸುಬ್ರಾಯ ಭಟ್ ಅವಾರ್ಡ್ ಮತ್ತು ಪ್ರೊಡಕ್ಟ್ ಇಂಜಿನಿಯರಿಂಗ್ ಅವಾರ್ಡ್ ಪಡೆದಿದ್ದಾರೆ. ತೆಂಕಾರಂದೂರು ಗ್ರಾಮದ ಕಂದ್ಲಾಜೆ ಭಾರತಿ ಮತ್ತು ದಯಾನಂದ ಪೂಜಾರಿ ದಂಪತಿಯ ಪುತ್ರ.