ಬೈಂದೂರು: ಭಜನೆ ಎಂಬ ಮೂರಕ್ಷರಕ್ಕೆ ಬಹಳ ಮಹತ್ವವಿದ್ದು, ನಮ್ಮಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂಥ ಒಂದು ಸಂಪತ್ತು ಇದ್ದರೆ ಅದು ಭಜನೆ. ಭಜನೆ ಭಕ್ತಿಪೂರ್ವಕವಾಗಿ ಅರ್ಪಿಸಿದರೆ ಭಗವಂತನಿಗೆ ಅದಕ್ಕಿಂತ ದೊಡ್ಡ ಹರಕೆಯಿಲ್ಲ ಎಂದು ವತ್ತಿನಕಟ್ಟೆ ಶ್ರೀ ಮಹಾಸತಿ ದೇವಸ್ಥಾನ ಪ್ರಧಾನ ಅರ್ಚಕ ಬೈಂದೂರು ಕೃಷ್ಣಮೂರ್ತಿ ನಾವಡ ಹೇಳಿದರು.
ಹೇರಂಜಾಲು ದಿ.ಶ್ರೀನಿವಾಸ ರಾವ್ ಪದ್ಮಾವತಿ ಅಮ್ಮ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನದ ಪ್ರವರ್ತಕ ನಾಗೇಶ ರಾವ್ ನೇತೃತ್ವದಲ್ಲಿ ಸಾಮೂಹಿಕ ಭಜನೆ ಮಂಗಲೋತ್ಸವದ ನಂತರ ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದರು. ಶ್ರೀ ಮೂಕಾಂಬಿಕಾ ಮಾತೃ ಭಜನಾ ಮಂಡಳಿ ಕೊಲ್ಲೂರು, ಶ್ರೀ ಮಹಾಸತಿ ಮಾತೃ ಭಜನಾ ಮಂಡಳಿ ಮಯ್ಯಡಿ, ಹಿರೇಮಹಾಲಿಂಗೇಶ್ವರ ಮಾತೃ ಭಜನಾ ಮಂಡಳಿ ಬಿಜೂರು, ಶ್ರೀ ಮಹಾಗಣಪತಿ ಮಹಾಸತಿ ಮಾತೃ ಭಜನಾ ಮಂಡಳಿ ಬಂಕೇಶ್ವರ ತಂಡದ ಸದಸ್ಯರಿಂದ ನಿರಂತರ ಭಜನಾ ಸಂಕೀರ್ತನೆ ನಡೆಯಿತು.