ತಾಲೂಕು ಮಟ್ಟದ ವಿವಿಧ ಸ್ಪರ್ಧೆ ಉದ್ಘಾಟನೆ

gowda

ಬ್ರಹ್ಮಾವರ: ನಾಡಪ್ರಭು ಕೆಂಪೇಗೌಡರ ಜನ್ಮದಿನಾಚರಣೆ ಅಂಗವಾಗಿ ಬ್ರಹ್ಮಾವರ ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿವಿಧ ಸ್ಪರ್ಧೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಿಆರ್‌ಸಿ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಬುಧವಾರ ಉದ್ಘಾಟಿಸಿದರು.

ಕನ್ನಡ ಭಾಷಣ: ಸಮೃದ್ಧಿ ಸ.ಸಂ.ಪ್ರೌ.ಶಾಲೆ ಮಣೂರು(ಪ್ರಥಮ), ಗಣೇಶ ಪ್ರಸಾದ ಸ.ಪ್ರೌ.ಶಾಲೆ ಆವರ್ಸೆ(ದ್ವಿತೀಯ), ನಿಧೀಶ್ ಭಟ್ ವಿ.ಪ.ಪೂ.ಕಾಲೇಜು ಕೋಟ(ತೃತೀಯ) ಚಿತ್ರಕಲೆ: ಸಾಧನ್ ಯು.ಆಚಾರ್ಯ ವಿ.ಪ.ಪೂ ಕಾಲೇಜು ಕೋಟ(ಪ್ರ), ಆಂಡ್ರಿಯಾ ಮಸ್ಕರೇನಸ್ ಎಸ್‌ವಿವಿಎನ್ ಹೇರಾಡಿ(ದ್ವಿ), ಪವನ್ ಕೆಪಿಎಸ್ ಕೊಕ್ಕರ್ಣೆ(ತೃ). ಪ್ರಬಂಧ: ಕವನ ಸ.ಸಂ.ಪ್ರೌ.ಶಾಲೆ ಮೂಡುಗಿಳಿಯಾರು(ಪ್ರ), ಸ್ವಸ್ತಿಕ್ ಸ.ಪ್ರೌ.ಶಾಲೆ ಆವರ್ಸೆ(ದ್ವಿ), ಸೌಜನ್ಯಾ ಎಸ್‌ಡಿಪಿ ಅ.ಪ್ರೌ ಶಾಲೆ ಮಂದಾರ್ತಿ(ತೃ).

ಬ್ರಹ್ಮಾವರ ವಲಯದ ಕಾರ್ಯಕ್ರಮದ ನೊಡಲ್ ಅಧಿಕಾರಿ ರಾಘವ ಶೆಟ್ಟಿ, ಇಸಿಒ ಬಿಂದಿಯಾ ಮತ್ತು ಬಿಆರ್‌ಪಿಗಳಾದ ಸುರೇಶ್ ಕುಂದರ್, ಉದಯ್ ಬಿ. ಮತ್ತು ಸಿಆರ್‌ಪಿಗಳಾದ ಚಂದ್ರಶೇಖರ್ ಸವಿತಾ, ಆಶಾಲತಾ ಉಪಸ್ಥಿತರಿದ್ದರು ಬ್ರಹ್ಮಾವರ ವಲಯದ ವಿವಿಧ ಪ್ರೌಢ ಶಾಲೆಗಳ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಾನಾ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…