ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರನ್ನು ಗೌರವಿಸುವುದರೊಂದಿಗೆ, ಅಬ್ದುಲ್ ಕಲಾಂ ಮತ್ತು ವಿವೇಕಾನಂದರು ನಮ್ಮ ಬದುಕಿನ ಆದರ್ಶವಾಗಬೇಕು ಎಂದು ಉದ್ಯಮಿ ಶ್ರೀನಿವಾಸ ಜೋಗಿ ಹೇಳಿದರು. ಕಂಡ್ಲೂರಿನ ರಾಮ್‌ಸನ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕಂಡ್ಲೂರು ನರಸಿಂಹ ಜೋಗಿ ಹಾಗೂ ಗಿರಿಜಾ ನರಸಿಂಹ ಜೋಗಿ ಸ್ಮರಣಾರ್ಥ ನೋಟ್ ಪುಸ್ತಕ, ಕ್ರೀಡಾ ಸಮವಸ್ತ್ರ ವಿತರಿಸಿ ಮಾತನಾಡಿದರು.
ಶಾಲಾಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಂಡ್ಲೂರಿನ ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಚಂದ್ರಶೇಖರ ಜೋಗಿ, ಗ್ರಾಪಂ ಸದಸ್ಯ ಪ್ರಕಾಶ್ಚಂದ್ರ ಶೆಟ್ಟಿ, ಉದ್ಯಮಿಗಳಾದ ಸುರೇಶ್ ಜೈನ್, ಪ್ರದೀಪ್ ಪ್ರಸಾದ್, ನರೇಂದ್ರ ಕುಮಾರ್, ವೆಂಕಟೇಶ ಹೆಬ್ಬಾರ್, ಚಂದು ಮಹಾರಾಜ್, ಮುರಳಿ ಜೋಶಿ, ಕೃಷ್ಣ ಜೋಗಿ, ಶೋಭಾ ಚಂದ್ರಶೇಖರ್ ಜೋಗಿ, ಅನಿತಾ ಶ್ರೀನಿವಾಸ್ ಜೋಗಿ, ಪ್ರಭಾರ ಮುಖ್ಯ ಶಿಕ್ಷಕಿ ಗೋಪಾಲ್ ವಿಷ್ಣು ಭಟ್ ಉಪಸ್ಥಿತರಿದ್ದರು.
ಚಂದ್ರಶೇಖರ್ ಜೋಗಿ ದಂಪತಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಹ ಶಿಕ್ಷಕಿ ರಜನಿ ಎಸ್.ಹೆಗಡೆ ಸ್ವಾಗತಿಸಿದರು. ಲಕ್ಷ್ಮೀ ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಸಹ ಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ರತ್ನಾ ವಂದಿಸಿದರು.