ಮಾಸ್ಕ್​ ಹಾಕಿಲ್ಲವೆಂದು ದಂಡ ವಿಧಿಸಿದ್ದಕ್ಕೆ ಪೊಲೀಸರ ಗತಿ ಏನಾಯ್ತು ನೋಡಿ...

police station
Published on

ಶಿವಮೊಗ್ಗ: ಎಂತೆಂಥ ಖತರ್ನಾಕ್​ ಕಳ್ಳರು ಇರ್ತಾರೆ ಗೊತ್ತಾ? ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದ ಓಡಾಡುತ್ತಿದ್ದವನಿಗೆ ದಂಡ ಹಾಕಿದ್ದಕ್ಕೆ ಪೊಲೀಸರ ಮೇಲೆ ಸಿಟ್ಟಿಗೆದ್ದ ದುಷ್ಕರ್ಮಿಯೊಬ್ಬ ಠಾಣೆ ಬಳಿಯಿದ್ದ ಪೇದೆಯ ಬೈಕ್​ ಅನ್ನೇ ಕದ್ದಿದ್ದಾನೆ!

ಇಂತಹ ವಿಚಿತ್ರ ಘಟನೆ ಹೊಸನಗರ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಸಂಭವಿಸಿದೆ. ಇದನ್ನೂ ಓದಿರಿ ಮೈಸೂರಲ್ಲಿ ನಕಲಿ ಡಾಕ್ಟರೇಟ್ ದಂಧೆ, ಶಾಸಕನ ಗೌರವ ಡಾಕ್ಟರೇಟ್ ತಡೆದ ಡಿಸಿಪಿ!

ಕರೋನಾ ಹಿನ್ನೆಲೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು ಎಂಬ ನಿಯಮವಿದೆ. ಆದರೂ ಚೇತನ್ ಎಂಬಾತ ಮಾಸ್ಕ್​ ಧರಿಸಿರಲಿಲ್ಲ. ಪೊಲೀಸರು ಈತನಿಗೆ ದಂಡ ವಿಧಿಸಿದ್ದರು. ಇದರಿಂದ ರೊಚ್ಚಿಗೆದ್ದ ಚೇತನ್​, ಪೊಲೀಸ್ ಠಾಣೆ ಪಕ್ಕದಲ್ಲಿ ನಿಲ್ಲಿಸಿದ್ದ ಪೇದೆ ರಾಘವೇಂದ್ರ ಅವರ ಬೈಕ್​ ಕದ್ದು ಪರಾರಿಯಾಗಿದ್ದ.

ಕದ್ದ ಬೈಕ್​ನಲ್ಲಿ ಚೇತನ್ ಕುಂದಾಪುರಕ್ಕೆ ತೆರಳಿದ್ದ. ಪ್ರಕಣರದ ಜಾಡು ಹಿಡಿದು ಹೊರಟ ಪೊಲೀಸರು ಘಟನೆ ನಡೆದ ಒಂದೇ ದಿನದಲ್ಲಿ ಅಂದರೆ ಶನಿವಾರ ಬೆಳಗ್ಗೆ ಆರೋಪಿಯನ್ನು ಬೈಕ್​ ಸಮೇತ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net