3 ವರ್ಷದ ಹಿಂದೆ ಮದ್ವೆಯಾಗಿದ್ದ ಮಹಿಳೆ ಆತ್ಮಹತ್ಯೆ; ಕೊಲೆ ಎಂದು ಪಾಲಕರ ಆರೋಪ

Suicide
Published on

ನೆಲಮಂಗಲ: ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಪಾಲಕರು ಇದನ್ನು ಕೊಲೆ ಎಂದು ಆರೋಪಿಸಿದ್ದಾರೆ. ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯ ಜಿಂದಾಲ್ ಬಳಿ ಈ ಪ್ರಕರಣ ನಡೆದಿದೆ.

ಶ್ರುತಿ (29) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಎಮ್​​ಎಸ್ಸಿ ಪದವೀಧರೆಯಾಗಿದ್ದ ಇವರು 2018ರಲ್ಲಿ ಮದುವೆಯಾಗಿದ್ದರು. ಮೈಸೂರು ಮೂಲದ ಈಕೆಯನ್ನು ಕನಕಪುರ ಚಿಕ್ಕಮುದ್ವಾಡಿ ಮೂಲದ ವಿನಯ್ ಆರಾಧ್ಯ ಎಂಬಾತನ ಜತೆ ಮದುವೆ ಮಾಡಿಸಲಾಗಿತ್ತು. ಬಿಇ ಎಂಟೆಕ್​ ವ್ಯಾಸಂಗ ಮಾಡಿದ್ದ ಪತಿ ಜಿಂದಾಲ್​ನಲ್ಲಿ ಉದ್ಯೋಗದಲ್ಲಿದ್ದು, ದಂಪತಿ ಚಿಕ್ಕಬಿದರಕಲ್ಲು ಬಳಿ ವಾಸವಿದ್ದರು.

ಅಳಿಯ ಹಾಗೂ ಆತನ ಮನೆಯವರಿಂದ ಮಗಳಿಗೆ ನಿರಂತರ ಕಿರುಕುಳ ನೀಡಲಾಗುತ್ತಿದ್ದು, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಾವಿಗೀಡಾಗಿರುವ ಮಹಿಳೆಯ ಪಾಲಕರು ಆರೋಪಿಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net