ರನ್​ ಅಡಿಕ್ಟ್​ ಸಂಸ್ಥೆಯಿಂದ ಮ್ಯಾರಥಾನ್​ ಆಯೋಜನೆ; 3 ಸಾವಿರಕ್ಕೂ ಅಧಿಕ ಮಂದಿ ಭಾಗಿ

Marathon
Published on

ಬೆಂಗಳೂರು: 'ರನ್​ ಅಡಿಕ್ಟ್​' ರಾಜರಾಜೇಶ್ವರಿ ನಗರ ಸಂಸ್ಥೆಯು ನಗರದ ಬಾಲಕೃಷ್ಣ ಬಯಲು ರಂಗಮಂದಿರದಿಂದ ಆಯೋಜಿಸಿದ್ದ ಆರನೇ ವರ್ಷದ ಮ್ಯಾರಥಾನ್​ ಓಟಕ್ಕೆ ಭಾನುವಾರ ಚಾಲನೆ ದೊರೆಯಿತು.

10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ ವಿಭಾಗದಲ್ಲಿ ಸುಮಾರು 3,500ಕ್ಕೂ ಹೆಚ್ಚಿನ ಮಂದಿ ಭಾಗವಹಿಸಿದ್ದರು.

ರನ್​ ಅಡಿಕ್ಟ್​ ಸಂಸ್ಥೆ ಸ್ವಯಂಸೇವಕರಿಂದ ಮುನ್ನಡೆಸುವ ಲಾಭ ರಹಿತ ಸಂಸ್ಥೆಯಾಗಿದೆ. ಸಂಸ್ಥೆ ವತಿಯಿಂದ ಈವರೆಗೆ ಗ್ರಾಮೀಣ ಸರ್ಕಾರಿ ಶಾಲೆಯ ಮಕ್ಕಳಿಗೆ ಒಂದುವರೆ ಲ ನೋಟ್​ ಪುಸ್ತಕ, 700ಕ್ಕೂ ಹೆಚ್ಚು ಡೆಸ್ಕ್​, ಆಟೋಟ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net