ಸಂಘದತ್ತ ಬರಲಿ ಯುವ ಪೀಳಿಗೆ : ವಿಶ್ವನಾಥ ನಾಯ್ಕ ಹೇಳಿಕೆ

New Project (3)
Published on

ಗುರುಪುರ: ಸಮಾಜ ಗುರುತಿಸಿದಾಗ ಖುಷಿಯಾಗುತ್ತದೆ. ನಮ್ಮವರ ಒಗ್ಗೂಡುವಿಕೆ, ಅದರಲ್ಲೂ ಮುಖ್ಯವಾಗಿ ಯುವ ಪೀಳಿಗೆ ಸಂಘದತ್ತ ಮುಖ ಮಾಡುವಲ್ಲಿ ಸಮಾಜದ ಜವಾಬ್ದಾರಿ ಸಾಕಷ್ಟಿದೆ. ಕರ್ತವ್ಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರತಿಯೊಬ್ಬರೂ ನಿಯಮ ಪಾಲಿಸಿದಲ್ಲಿ ಯಾರಲ್ಲಾದರೂ ಮಾತನಾಡುವ ಧೈರ್ಯ ಬರುತ್ತದೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ ಹೇಳಿದರು.

ಗಂಜಿಮಠದ ಮರಾಠಿ ಸಮಾಜ ಮಂದಿರದಲ್ಲಿ ಭಾನುವಾರ ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾ ಸಂಘದ 5ನೇ ವಾರ್ಷಿಕ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಹಾಸಭೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಗಂಜಿಮಠ ಗ್ರಾಪಂ ಅಧ್ಯಕ್ಷೆ ಮಾಲತಿ ಎಂ., ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕಿ ಅಕ್ಕಮ್ಮ ಸಂಘದ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷ್ಣ ಭಟ್ ಕುಪ್ಪೆಪದವು ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ವ್ರತ ನಡೆಯಿತು. ಸಂಘದ ಗೌರವಾಧ್ಯಕ್ಷ ವಿ.ಪಿ.ನಾಯ್ಕ ಮಂಗಳೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಶೋಕ್ ನಾಯ್ಕ ಮುಚ್ಚೂರು ವರದಿ ಓದಿದರು. ಸಂಘದ ಮಹಿಳಾ ಘಟಕದ ಕಾರ್ಯದರ್ಶಿ ಶಿಕ್ಷಕಿ ನಿವೇದಿತಾ ಬೋರುಗುಡ್ಡೆ ಸನ್ಮಾನ ಪತ್ರ ವಾಚಿಸಿದರು. ಶ್ರಾವ್ಯಾ ನಿರೂಪಿಸಿದರು. ಸಂಘದ ನೂತನ ಅಧ್ಯಕ್ಷ ಗುಣಪಾಲ ನಾಯ್ಕ ವಂದಿಸಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ರೋಹಿಣಿ ಜಿ., ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಜಾತಿಯವರು ಪ್ರಾಮಾಣಿಕರಾಗಿದ್ದಾರೆ. ಸಾಧಕರನ್ನು ಗುರುತಿಸಿದಾಗ ಒಟ್ಟು ಸಮಾಜಕ್ಕೆ ಮರಾಠಿ ಸಮಾಜದ ಕೊಡುಗೆ ಏನೆಂಬುದು ಮನವರಿಕೆಯಾಗುತ್ತದೆ. ಸಂಘವು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತ ಬಂದಿದೆ. ನೂತನ ಅಧ್ಯಕ್ಷ ಗುಣಪಾಲ ನಾಯ್ಕ ಅವರ ಕಾರ್ಯಾವಧಿಯಲ್ಲೂ ಈ ಕೆಲಸ ಮುಂದುವರಿಯಲಿ. ಸಮಾಜದವರ ಕಷ್ಟಕ್ಕೆ ಸಂಘವಿದೆ. ಶೇಖರ ಕಡ್ತಲ, ಸಂಘದ ಅಧ್ಯಕ್ಷ

ವಿಶ್ವನಾಥ ನಾಯ್ಕ(ನಿವೃತ್ತ ಸಾರಿಗೆ ಅಧಿಕಾರಿ), ಪ್ರಭಾಕರ ನಾಯ್ಕ(ನಿವೃತ್ತ ಯೋಧ), ಕಮಲಾ ಪಿ.ನಾಯ್ಕ(ನಿವೃತ್ತ ವಿಮಾನ ನಿಲ್ದಾಣ ಉದ್ಯೋಗಿ), ಸಂಧ್ಯಾ ಜಿ.,(ನಿವೃತ್ತ ಬ್ಯಾಂಕ್ ಅಧಿಕಾರಿ), ಕ್ರೀಡಾಪಟು ಮಾ.ನಿಶಿತ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ದಿ.ಗುರಿಕಾರ ಪುತ್ತು ನಾಯ್ಕ ಮತ್ತು ದಿ.ಕಲ್ಯಾಣಿ ನಾಯ್ಕ ಒಡ್ಡೂರು ಸ್ಮರಣಾರ್ಥ ವಿ.ಪಿ.ನಾಯ್ಕ ಮಂಗಳೂರು ಕೊಡುಗೆಯಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ನಗದು ನೀಡಲಾಯಿತು. ಸಮಾಜದ ನವ ವಿವಾಹಿತ ದಂಪತಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net