

ಪೆರ್ಲ: ಶ್ರೀ ಶಾರದಾ ಮರಾಟಿ ಸವಾಜ ಸೇವಾ ಸಂ, ಶಾರದಾ ಮರಾಟಿ ಮಹಿಳಾ ವೇದಿಕೆ, ಶಾರದಾ ಮರಾಟಿ ಚಾರಿಟೆಬಲ್ ಟ್ರಸ್ಟ್ ನ ನೇತತ್ವದಲ್ಲಿ ಮರಾಟಿ ಬೋರ್ಡಿಂಗ್ ಹಾಲ್‌ನ 6ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಭಾನುವಾರ ಜರುಗಿತು.
ಬೆಳಗ್ಗೆ ಶಾರದಾ ಮರಾಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಬಳಿಕ ಬಾಲಕೃಷ್ಣ ಕಾರಂತ ಅಳಿಕೆ ನೇತೃತ್ವದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಸಭಾ ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಮರಾಟಿ ಸವಾಜ ಸೇವಾ ಸಂದ ವಾಜಿ ಅಧ್ಯಕ್ಷ, ಕೆನರಾ ಬ್ಯಾಂಕ್ ನಿವೃತ್ತ ಎಜಿಎಂ ರವಿ ಪ್ರಸಾದ್ ನಾಯ್ಕ ಉದ್ಘಾಟಿಸಿದರು. ಸವಾಜದ ಹಿರಿಯ ಸಾಧಕರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಾರದಾ ಮರಾಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಜಿ.ನಾಯ್ಕ, ಪ್ರಮುಖರಾದ ಡಾ.ವಿಜಯ ಕುವಾರ್, ಸೇಸಮ್ಮ ಕೆ.ಎಸ್., ಗೋವಿಂದ ನಾಯ್ಕ ನೆಗಳಗುಳಿ, ಸುಕುವಾರ ನಾಯ್ಕ ಬಾರಿಕ್ಕಾಡ್, ಪುಷ್ಪಾ ಅಮೆಕ್ಕಳ, ಡಾ.ಬಿ.ಶಿವ ನಾಯ್ಕ, ಡಾ.ಸಿ.ಎಚ್.ಜನಾರ್ದನ ನಾಯ್ಕ, ವಾರಿಜಾ ಅಡ್ಯನಡ್ಕ, ಡಾ.ಬಿ.ನಾರಾಯಣ ನಾಯ್ಕ, ರತ್ನಾವತಿ, ರೇವತಿ, ಡಾ.ಕೃಷ್ಣ ನಾಯ್ಕ, ಲಕ್ಷ್ಮೀ ಟೀಚರ್ ನಲ್ಕ, ಸತೀಶ್ ಕುವಾರ್ ಕಯ್ಯಾರು, ಮಂಜುಶ್ರೀ ನಲ್ಕ ಮೊದಲಾದವರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.