ಆತ್ಮಹತ್ಯೆ ಮಾಡಿದಾಕೆ ಬರೆದಿಟ್ಟ ಪತ್ರ ಪತ್ತೆ

deathnote
Published on

ಮುಳ್ಳೇರಿಯ: ಬೋವಿಕ್ಕಾನ ಬಳಿಯ ಪೊವ್ವಲ್​ ಬೆಂಚ್​ ಕೋರ್ಟ್​ ಸಮೀಪದ ಪಿ.ಎ.ಜಾಫರ್​ ಎಂಬುವವರ ಪತ್ನಿ ಅಲೀಮ ಯಾನೆ ಶೈಮ(35) ಆತ್ಮಹತ್ಯೆ ಮಾಡಿಕೊಂಡಿದ್ದು. ಇದಕ್ಕೂ ಮುನ್ನ ಅವರು ಬರೆದಿಟ್ಟ ಪತ್ರ ಪತ್ತೆಯಾಗಿದೆ.

ಅದರಲ್ಲಿ ಬೆಚ್ಚಿ ಬೀಳಿಸುವ ಕೆಲವು ಮಾಹಿತಿಗಳಿವೆಯೆನ್ನಲಾಗಿದೆ. ತನಿಖೆಗೆ ಅಡ್ಡಿಯಾಗಬಹುದೆಂಬ ಕಾರಣದಿಂದ ಪತ್ರದಲ್ಲಿರುವ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಮಂಗಳವಾರ ರಾತ್ರಿ ಮನೆಯ ಬಾತ್​ ರೂಂನಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಶೈಮ ಅವರ ಮೃತದೇಹ ಪತ್ತೆಯಾಗಿತ್ತು. ಪತಿಯ ಕಿರುಕುಳ ಸಹಿಸಲಾಗದೆ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಂಬಂಧಿಕರು ಆರೋಪಿಸಿದ್ದಾರೆ. ಶೈಮ ಸುಳ್ಯ ಜಯನಗರ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net