ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಅವಘಡ; ಹಲವರಿಗೆ ಗಾಯ

ಎತ್ತು ಬೆದರಿಸುವ ಸ್ಪರ್ಧೆ
Published on

ವಿಜಯಪುರ: ವಿಜಯಪುರ ಜಿಲ್ಲೆಯ ಕಂಬಳ ಎಂದೇ ಸುಪ್ರಸಿದ್ಧವಾಗಿರುವ ಕಾಖಂಡಕಿ ಕಾರಹುಣ್ಣಿಮೆ ಎತ್ತು ಬೆದರಿಸುವ ಸ್ಪರ್ಧೆಯಲ್ಲಿ ಹೋರಿಗಳ ತೀವ್ರ ತಿವಿತದಿಂದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರಹುಣ್ಣಿಮೆ ಮುಗಿದ ಏಳು ದಿನದ ನಂತರ ಕಾಖಂಡಕಿಯಲ್ಲಿ ಪ್ರತಿವರ್ಷ ಕಾರಹುಣ್ಣಿಮೆ ಆಚರಿಸುವುದು ಸಂಪ್ರದಾಯ. ಈ ಸಂದರ್ಭದಲ್ಲಿ ಎತ್ತು ಬೆದರಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಜನರು ಆಗಮಿಸಿದ್ದರು.

ಎತ್ತು ಬೆದರಿಸುವ ಸ್ಪರ್ಧೆ

ಗ್ರಾಮದ ಹಿರಿಯರಾದ ರಾಮನಗೌಡ ಪಾಟೀಲ ಅವರ ಮನೆಯಿಂದ ಕೆಂಪು ಮತ್ತು ಬಿಳಿ ಕರಿ ಹರಿಯುವ ಎತ್ತು ತಂದು ವಾದ್ಯ ಮೇಳದೊಂದಿಗೆ ಎತ್ತುಗಳ ಭವ್ಯ ಮೆರವಣಿಗೆ ನಡೆಸಿ, ತದನಂತರ ಎತ್ತು ಬೆದರಿಸುವ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಸ್ಪರ್ಧೆಯಲ್ಲಿ ಎತ್ತುಗಳು ಎಗ್ಗಿಲ್ಲದೆ ನುಗ್ಗಿದ್ದರಿಂದ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಎತ್ತುಗಳ ನೇರ ತಿವಿತದಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಪ್ರತಿವರ್ಷವೂ ನಡೆಯುವ ಅವಘಢ

ಪ್ರತಿವರ್ಷವೂ ಕಾಖಂಡಕಿ ದನ ಬೆದರಿಸುವ ಸ್ಪರ್ಧೆ ಸಂದರ್ಭದಲ್ಲಿ ಒಂದಿಲ್ಲೊಂದು ಅವಘಡ ಸಂಭವಿಸುತ್ತಿದೆ. ಎರಡು ವರ್ಷದ ಹಿಂದೆ ವ್ಯಕ್ತಿಯೊಬ್ಬ ಎತ್ತಿನ ಕೋಡಿನ ತಿವಿತದಿಂದ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದನು. ಕಳೆದ ವರ್ಷ ಐದಕ್ಕೂ ಅಧಿಕ ಜನ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದನ್ನು ನೆನಪಿಸಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net