

ಬೆಂಗಳೂರು: ತಮ್ಮ ಮೊದಲ ಚಿತ್ರ 'ಸಾಮ್ರಾಟ್ ಪೃಥ್ವಿರಾಜ್' ಬಗ್ಗೆ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಆ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅಷ್ಟೇನೂ ಸುದ್ದಿ ಮಾಡಲಿಲ್ಲ. ಈಗ ಇನ್ನೊಂದು ಕಾರಣಕ್ಕೆ ಮಾನುಷಿ ಸುದ್ದಿಯಲ್ಲಿದ್ದಾರೆ.
ನಿಖಿಲ್ ಮತ್ತು ಮಾನುಷಿ ಕಳೆದ ವರ್ಷ ಭೇಟಿಯಾದರಂತೆ. ಕ್ರಮೇಣ ಹತ್ತಿರವಾದ ಅವರಿಬ್ಬರೂ, ಇದುವರೆಗೂ ಹಲವು ಕಡೆ ಸುತ್ತಿ ಬಂದಿದ್ದಾರಂತೆ. ಕೆಲವು ದಿನಗಳಿಂದ ಅವರಿಬ್ಬರೂ ಜತೆಯಾಗಿಯೇ ಇದ್ದಾರೆ ಎಂಬ ಸುದ್ದಿಯೂ ಇದೆ. ಆದರೆ, ಈ ಸುದ್ದಿ ಹೊರಬಿದ್ದರೆ, ಅದು ಮಾನುಷಿ ವೃತ್ತಿಜೀವನಕ್ಕೆ ಸಮಸ್ಯೆ ಆಗಬಹುದು ಎಂಬ ಅಳುಕು ಇಬ್ಬರಲ್ಲೂ ಇದೆ. ಮೊದಲೇ ಆಕೆಯ ಮೊದಲ ಚಿತ್ರ ಸೋತಿದೆ. ಇನ್ನು, ಆಕೆ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದರೆ, ಆಕೆಗೆ ಆಫರ್ಗಳು ಕಡಿಮೆಯಾಗಬಹುದು ಎಂಬ ಭಯಕ್ಕೆ ಈ ವಿಷಯವನ್ನು ಮುಚ್ಚಿಡಲಾಗಿದೆಯಂತೆ.
ನಿಖಿಲ್, ಮಾನುಷಿಯನ್ನು ಮದುವೆಯಾದರೆ ಇದು ಅವರ ಎರಡನೇ ಮದುವೆಯಾದಂತಾಗುತ್ತದೆ. ಇದಕ್ಕೂ ಮುನ್ನ 2019ರಲ್ಲಿ ಅವರು ಅಮಾಂಡಾ ಪೂರ್ವಾಂಕರ ಅವರನ್ನು ಮದುವೆಯಾಗಿದ್ದರು. ಅದಾಗಿ ಒಂದು ವರ್ಷದಲ್ಲೇ ಅವರಿಬ್ಬರ ಮದುವೆ ಮುರಿದ್ದು ಬಿದ್ದಿತ್ತು. ಈಗ ಮಾನುಷಿಯತ್ತ ನಿಖಿಲ್ ಆಕರ್ಷಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.