ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಒತ್ತು: ಕೆ.ಜಯಪ್ರಕಾಶ್ ಹೆಗ್ಡೆ

mannual
ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಜತೆ ಯೋಜನೆ ಅನುಷ್ಠಾನದ ಕೈಪಿಡಿಯನ್ನು ಬ್ರಹ್ಮಾವರದಲ್ಲಿ ಬಿಡುಗಡೆ ಮಾಡಿದರು.
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಜತೆ ‘ಸಮೃದ್ಧ ಉಡುಪಿ ಮತ್ತು ಚಿಕ್ಕಮಗಳೂರು ಕ್ಷೇತ್ರ ನನ್ನ ಕನಸು’ ಯೋಜನೆ ಅನುಷ್ಠಾನದ ಕೈಪಿಡಿಯನ್ನು ಬ್ರಹ್ಮಾವರದಲ್ಲಿ ಬಿಡುಗಡೆ ಮಾಡಿದರು.

ಮೀನುಗಾರಿಕೆ ಬಂದರು ಅಭಿವೃದ್ಧಿಗೆ ಅಳಿವೆ ಮತ್ತು ಬಂದರಿನ ಡ್ರೆಜ್ಜಿಂಗ್ ಹಾಗೂ ಬ್ರೇಕ್ ವಾಟರ್ ಯೋಜನೆಗಳಿಗೆ ಒತ್ತು, ಮೀನುಗಾರಿಕಾ ಬಂದರಿನ ಸ್ವಚ್ಛತೆಗೆ ಆದ್ಯತೆ ನೀಡುವುದು, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯಗಳನ್ನು ಮೀನುಗಾರಿಕಾ ಕಾರ್ಮಿಕರಿಗೂ ವಿಸ್ತರಿಸಲು ಪ್ರಯತ್ನಿಸುವುದು, ಸಾಂಪ್ರದಾಯಿಕ ಮಹಿಳಾ ಮೀನುಗಾರರಿಗೆ ಬಡ್ಡಿರಹಿತ ಸಾಲ, ನಿವೃತ್ತ ಮೀನುಗಾರರಿಗೆ ಪಿಂಚಣಿ ಸೌಲಭ್ಯಕ್ಕೆ ಪ್ರಯತ್ನ, ನಾಡದೋಣಿ ಸೀಮೆ ಎಣ್ಣೆ ಸಹಾಯಧನವನ್ನು ಕನಿಷ್ಠ 50 ರೂ.ಗೆ ಹೆಚ್ಚಳ, ಸಂಕಷ್ಟ ಪರಿಹಾರ ಸಹಾಯಧನವನ್ನು 10 ಲಕ್ಷ ರೂ. ಹಾಗೂ ಮತ್ಸಾಶ್ರಯ ಯೋಜನೆಯ ಸಹಾಯಧನ 5 ಲಕ್ಷ ರೂ.ಗೆ ಹೆಚ್ಚಿಸಲು ಪ್ರಯತ್ನಿಸುವುದು, ಪ್ರಧಾನಿ ಮತ್ಸೃಸಂಪದ ಯೋಜನೆಯ ಸದುಪಯೋಗಕ್ಕೆ ಶ್ರಮಿಸುವುದು, 1984ರ ಮೀನುಗಾರಿಕಾ ಕಾಯ್ದೆಗೆ ಸೂಕ್ತ ತಿದ್ದುಪಡಿ, ಮೀನುಗಾರಿಕೆಗೆ ಸಂಬಂಧಪಟ್ಟಂತೆ ಮಲೆನಾಡು ಅಭಿವೃದ್ಧಿ, ಕಾಫಿ ಬೆಳೆಗಾರರು ಸೇರಿದಂತೆ ಅನೇಕ ಅಭಿವೃದ್ಧಿ ಯೋಜನೆಗಳ ಕನಸನ್ನು ಸಾಕಾರಗೊಳಿಸುವ ಮಾಹಿತಿ ಪ್ರಣಾಳಿಕೆಯಲ್ಲಿದೆ. ಪ್ರತಿ ಮತದಾರರಿಗೆ ತಲುಪಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net