ಮನ್ನಾರಾ ಕೆನ್ನೆಗೆ ಮುತ್ತಿಟ್ಟ ರವಿ ; ನಿರ್ದೇಶಕನ​ ಪರ ನಿಂತ ಕನ್ನಡದ ನಟಿ

Mannara Chopra (14)
Published on

ಬಾಲಿವುಡ್ ಜತೆ ಸದ್ಯ ಹಾಲಿವುಡ್‌ನಲ್ಲೂ ಬಿಜಿಯಿರುವ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿ ಮನ್ನಾರಾ ಚೋಪ್ರಾ. ಕನ್ನಡದ ‘ರೋಗ್’ ಸೇರಿ ಹಿಂದಿಯಲ್ಲಿ ‘ಜಿದ್’, ತಮಿಳಿನಲ್ಲಿ ‘ಕಾವಲ್’, ತೆಲುಗಿನಲ್ಲಿ ‘ಜಕ್ಕನ್ನ’, ‘ಸೀತಾ’ ಚಿತ್ರಗಳಲ್ಲಿ ನಟಿಸಿರುವ ಖ್ಯಾತಿ ಮನ್ನಾರಾಗೆ ಸಲ್ಲುತ್ತದೆ. ಇಂತಹ ಮನ್ನಾರಾ ಸದ್ಯ ‘ತಿರಗಬದರ ಸಾಮಿ’ ಚಿತ್ರದಲ್ಲಿ ರಾಜ್ ತರುಣ್ ಮತ್ತು ಮಾಳ್ವಿ ಮಲ್ಹೋತ್ರಾ ಜತೆ ನಟಿಸಿದ್ದು, ಕೆಲ ದಿನಗಳಿಂದ ಪ್ರಚಾರದಲ್ಲಿ ಬಿಜಿಯಿದ್ದಾರೆ.

ಇತ್ತೀಚೆಗಷ್ಟೆ ಪ್ರಚಾರದ ಸಮಯದಲ್ಲಿ ಚಿತ್ರದ ನಿರ್ದೇಶಕ ಎ.ಎಸ್. ರವಿಕುಮಾರ್ ಚೌಧರಿ, ಮನ್ನಾರಾ ಕೆನ್ನೆಗೆ ಮುತ್ತಿಟ್ಟಿದ್ದರು. ಆ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿ, ಹಲವರು ನಿರ್ದೇಶಕನ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಮನ್ನಾರಾ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ನಿರ್ದೇಶಕರಿಗೆ ಸಿನಿಮಾದಲ್ಲಿ ನನ್ನ ಕೆಲಸ ಇಷ್ಟವಾಗಿದೆ ಅಂತನ್ನಿಸುತ್ತದೆ. ಹೀಗಾಗಿಯೇ ನನ್ನ ಭಾಗದ ಚಿತ್ರೀಕರಣ ಇಲ್ಲದಿದ್ದರೂ, ಸೆಟ್‌ಗೆ ಬರಲು ಹೇಳುತ್ತಿದ್ದರು. ಈಗ ಪ್ರಚಾರದ ವೇಳೆ ತುಂಬ ಎಕ್ಸೈಟ್ ಆದ ಕಾರಣ ಹಾಗೆ ಮಾಡಿರಬಹುದು. ಕೆಲವೊಮ್ಮೆ ಎಕ್ಸೈಟ್ ಆಗಿ ಜನ ಮೈಮರೆಯುವುದುಂಟು. ಈ ಘಟನೆಯಿಂದ ನನ್ನ ಸಿನಿಮಾ ಪ್ರಚಾರ ಈ ರೀತಿಯ ತಿರುವು ಪಡೆಯುತ್ತದೆ ಅಂತ ಗೊತ್ತಿರಲಿಲ್ಲ. ಆದರೆ, ಘಟನೆಯ ಬಗ್ಗೆ ಹೆಚ್ಚಾಗಿ ಬೇರೇನೂ ಹೇಳಲಾರೆ’ ಎಂದು ಮನ್ನಾರಾ ಹೇಳಿಕೊಂಡಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net