

ನವದೆಹಲಿ: ಲಡಾಖ್ನಲ್ಲಿ ತನ್ನ ಭೂಪ್ರದೇಶದ ಮೇಲೆ ಕಣ್ಣಿಟ್ಟವರಿಗೆ ಭಾರತ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಹೇಳಿದರು ಪ್ರಧಾನಿ ಮೋದಿ ಖಡಕ್ಕಾಗಿ ಹೇಳಿದರು.
ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಗಾಲ್ವಾನ್ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಭಾರತ-ಚೀನಾ ಚಕಮಕಿ ಕುರಿತು ಮಾತನಾಡಿದರು.
ಜೂನ್ 15 ರ ಸಂಘರ್ಷದಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಅವರು ಗೌರವ ಸಲ್ಲಿಸಿದರು "ಭಾರತವು ಸ್ನೇಹವನ್ನು ಹೇಗೆ ಕಾಪಾಡಿಕೊಳ್ಳಬೇಕೆಂದು ತಿಳಿದಿದೆ ಎಂದ ಮೇಲೆ ಶತ್ರುಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿವುದನ್ನೂ ತಿಳಿದಿದೆ. ನಮ್ಮ ಧೈರ್ಯಶಾಲಿ ಯೋಧರು ಮಾತೃಭೂಮಿಯ ವೈಭವವನ್ನು ಹಾನಿ ಮಾಡಲು ಯಾರಿಗೂ ಬಿಡುವುದಿಲ್ಲ ಎಂದು ಸಾಬೀತುಪಡಿಸಿದ್ದಾರೆ ”ಎಂದು ಪ್ರಧಾನಿ ಮೋದಿ ಹೇಳಿದರು.
ಮಾತುಕತೆ ಯಾವಾಗ?: ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆ ಕುರಿತು ಮಾತುಕತೆ ಯಾವಾಗ ನಡೆಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಅವರು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ನಲ್ಲಿನ ಮೋದಿಯವರ ಮಾತಿಗೆ ಪ್ರತಿಯಾಗಿ ಈ ರೀತಿ ಪ್ರಶ್ನಿಸಿದರು.
ಪೂರ್ವ ಲಡಾಖ್ನ ವಾಸ್ತವ ಗಡಿ ರೇಖೆಯಲ್ಲಿ (ಎಲ್ಎಸಿ) ಚೀನಾದ ಆಕ್ರಮಣವನ್ನು ನಿಭಾಯಿಸಿದ ಬಗ್ಗೆ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ರಾಷ್ಟ್ರದ ರಕ್ಷಣೆ ಮತ್ತು ಸುರಕ್ಷತೆಯ ಬಗ್ಗೆ ಯಾವಾಗ ಮಾತನಾಡಬಹುದು? ಎಂದು ಅವರು ಟ್ವೀಟ್ ಮಾಡಿದ್ದಾರೆ.
ಚೀನಾದೊಂದಿಗಿನ ಚಕಮಕಿ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ಯುದ್ಧ ನಡೆದಿದೆ. ರಾಹುಲ್ ಗಾಂಧಿ ಸರ್ಕಾರಕ್ಕೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳಿದ್ದು, ಲಡಾಖ್ನ ವಾಸ್ತವ ಗಡಿ ರೇಖೆಯಲ್ಲಿ ಚೀನಾ ಜೊತೆದೊಂದಿಗಿನ ನಿಲುವು ಮತ್ತು ಭಾರತದ ಭೂಪ್ರದೇಶಕ್ಕೆ ಚೀನಿಯರ ಆಕ್ರಮಣದ ಬಗ್ಗೆ ಪ್ರಧಾನಿ ಮೋದಿಯವರಿಂದ ಉತ್ತರ ನಿರೀಕ್ಷಿಸುತ್ತಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ನೇಪಾಳ ಕೂಡ ಮೊದಲ ಬಾರಿಗೆ ಭಾರತದ ಗಡಿಯಲ್ಲಿ ತನ್ನ ಸೈನ್ಯವನ್ನು ನಿಯೋಜಿಸಿದೆ, ಮೋದಿ ಇದ್ದಾಗಲೇ ಇದು ಸಾಧ್ಯ ಎಂದು ಕುಟಕಿಯಾಡಿದ್ದಾರೆ.
"ಈಗ, ನೇಪಾಳ ಮೊದಲ ಬಾರಿಗೆ ತನ್ನ ಸೈನ್ಯವನ್ನು ಗಡಿಯಲ್ಲಿ ನಿಯೋಜಿಸಿದೆ. ಮೋದಿ ಇದ್ದರೆ, ಇದು ಕೂಡ ಸಾಧ್ಯ " ಎಂದು ಮೋದಿ ಹೈ ತೋ ಮುಮ್ಕೀನ್ ಹೈ ಎಂಬ ಘೋಷವಾಕ್ಯ ಉಲ್ಲೇಖಿಸಿ ಮಾತನಾಡಿದ್ದಾರೆ.