More

    ‘ಬಿಗ್​ ಬಾಸ್​’ ಗೆದ್ದು ಬಂದ ರೂಪೇಶ್​ ಶೆಟ್ಟಿ ಅಭಿನಯದ ಚಿತ್ರವೊಂದು 13ಕ್ಕೆ ಬಿಡುಗಡೆ

    ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ಕಾರಣಾಂತರಗಳಿಂದ ತಡವಾಗಿ ಕಳೆದ ವರ್ಷ ಬಿಡುಗಡೆಯಾಗಬೇಕಿತ್ತಂತೆ. ‘ಬಿಗ್​ ಬಾಸ್​’ ಮನೆಯಲ್ಲಿದ್ದ ರೂಪೇಶ್​ ಶೆಟ್ಟಿ, ತಮ್ಮ ಅನುಪಸ್ಥಿತಿಯಲ್ಲೇ ಚಿತ್ರ ಬಿಡುಗಡೆಯಾಗಬಹುದು ಅಂದುಕೊಂಡಿದ್ದರಂತೆ. ಆದರೆ, ಚಿತ್ರತಂಡದವರು ಬುದ್ಧಿವಂತರು. ಇಷ್ಟು ದಿನ ಸುಮ್ಮನಿದ್ದ ಅವರು, ‘ಬಿಗ್​ ಬಾಸ್​’ ಮನೆಯಲ್ಲಿ ರೂಪೇಶ್​ ಗೆಲ್ಲುತ್ತಿದ್ದಂತೆಯೇ, ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ‘ಗೂರ್ಖಾ’ ಚಿತ್ರದಿಂದ ಹಿಂದೆ ಸರಿದ ಅಕ್ಷಯ್​ ಕುಮಾರ್​; ಕಾರಣ ಏನು?

    ಅಂದಹಾಗೆ, ಚಿತ್ರದ ಹೆಸರು ‘ಮಂಕು ಭಾಯ್ ಫಾಕ್ಸಿ ರಾಣಿ’. ರೂಪೇಶ್​ ನಾಯಕನಾಗಿ ಅಭಿನಯಿಸಿರುವ ಐದನೇ ಕನ್ನಡ ಚಿತ್ರವಂತೆ ಇದು. ಈ ಚಿತ್ರವನ್ನು ಗಗನ್​ ನಿರ್ದೇಶಿಸಿದ್ದು, ಜ.13ಕ್ಕೆ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮೊದಲ ಹಂತವಾಗಿ ಗುರುವಾರ ಚಿತ್ರದ ಟ್ರೈಲರ್​ ಬಿಡುಗಡೆ ಮಾಡಲಾಗಿದೆ.

    ‘ಮಂಕು ಭಾಯ್ ಫಾಕ್ಸಿ ರಾಣಿ’ ಕುರಿತು ಮಾತನಾಡುವ ಗಗನ್​, ‘ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ದ ಮಾಡಿಕೊಂಡ್ವಿ. 2019ರಲ್ಲಿ ಆರಂಭವಾದ ಸಿನಿಮಾವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಪೂರ್ತಿ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಜೀವನದಲ್ಲಿ ನಡೆಯುವ ಪ್ರೀತಿಯ ಸುತ್ತ ಕಥೆಯನ್ನು ಹೆಣೆಯಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

    ಈ ಚಿತ್ರದಲ್ಲಿ ಕಥೆಯೇ ಹೀರೋ ಎನ್ನುವ ರೂಪೇಶ್​, ‘ಈ ಚಿತ್ರಕ್ಕಾಗಿ ಎಂಟು ಕೆಜಿ ದಪ್ಪ ಆಗಿದ್ದೆ. ಇದಕ್ಕೂ ಮುನ್ನ ‘ಡೇಂಜರ್ ಝೋನ್’, ‘ಅನುಷ್ಕಾ’, ‘ನಿಶಬ್ಧ 2’, ‘ಗೋವಿಂದ ಗೋವಿಂದ’ ಚಿತ್ರಗಳಲ್ಲಿ ನಟಿಸಿದ್ದೆ. ಆಗೆಲ್ಲಾ ಆ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳುತ್ತಿದ್ದೆ. ಇದೇ ಮೊದಲ ಬಾರಿಗೆ ರೂಪೇಶ್ ಶೆಟ್ಟಿ ಸಿನಿಮಾ ಬರ್ತಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದು ತುಂಬಾ ಖುಷಿ ಕೊಡ್ತಿದೆ. ಇದಕ್ಕೆಲ್ಲ ‘ಬಿಗ್ ಬಾಸ್’ ಕಾರಣ’ ಎಂದು ಸಂತಸ ಹಂಚಿಕೊಂಡರು.

    ಇದನ್ನೂ ಓದಿ: ‘ಮಿಸ್ಟರ್​ ಬ್ಯಾಚುಲರ್​’ ಆಗಿ ನಾಳೆ ಚಿತ್ರಮಂದಿರಕ್ಕೆ ಬರಲಿದ್ದಾರೆ ‘ಡಾರ್ಲಿಂಗ್​’ ಕೃಷ್ಣ

    ಈ ಚಿತ್ರದಲ್ಲಿ ನಾಯಕಿಯರಾಗಿ ಗೀತಾ ಭಾರತಿ ಭಟ್​ ಮತ್ತು ಪಂಚಮಿ ರಾವ್​ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ತುಮ್ಮಿನಾಡ್​, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜೋಶ್ವ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಡಿ ಈ ಚಿತ್ರವನ್ನು ಜೋಶ್ವ ಜೈಶಾನ್ ಕ್ರಾಸ್ತ ನಿರ್ಮಾಣ ಮಾಡಿದ್ದಾರೆ. ವಿನ್ಯಾಸ್ ಮದ್ಯ ಮತ್ತು ಶಮೀರ್ ಮುಡಿಪು ಸಂಗೀತ ಈ ಚಿತ್ರಕ್ಕಿದೆ.

    ‘ನಿನ್ನನ್ನು ನೋಡಿದ ನಂತರ …’ ಏನಾಯ್ತು ಅಂತ ಹೇಳ್ತಾರೆ ಗಣೇಶ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts