ನೇಪಾಳದ ಪರಿಷ್ಕೃತ ನಕ್ಷೆ ಬೆಂಬಲಿಸಿ ಸಿಕ್ಕಾಪಟ್ಟೆ ಟ್ರೋಲ್​ ಆದ ನಟಿ

manisha
Published on

ನವದೆಹಲಿ: ನೇಪಾಳ ಮೂಲದ ಬಾಲಿವುಡ್​ನ ಹಿರಿಯ ನಟಿ ಮನೀಷಾ ಕೊಯಿರಾಲಾ ಭಾರತದ ವಿವಾದಾತ್ಮಕ ಪ್ರದೇಶಗಳನ್ನು ಸೇರಿಸಿಕೊಂಡು ನೇಪಾಳ ಸಿದ್ಧಪಡಿಸಿರುವ ಪರಿಷ್ಕೃತ ನಕ್ಷೆಯನ್ನು ಬೆಂಬಲಿಸಿದ್ದಾರೆ. ಇದು ಭಾರತೀಯ ನೆಟ್ಟಿಗರನ್ನು ಕೆರಳಿಸಿದೆ.

ಲಡಾಖ್​ ಬಳಿಯ ಲಿಪುಲೇಖ್​, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳು ಭಾರತಕ್ಕೆ ಸೇರಿದ್ದಾದರೂ, ಈ ಪ್ರದೇಶಗಳು ತಮ್ಮದೆಂದು ಹೇಳಿಕೊಂಡು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಓಲಿ ಪರಿಷ್ಕೃತ ನಕ್ಷೆ ಸಿದ್ಧಪಡಿಸಿ ಸಂಸತ್​ನ ಎರಡೂ ಮನೆಗಳಲ್ಲಿ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿ ಟ್ವೀಟ್​ ಮಾಡಿರುವ ಮನೀಷಾ ಕೊಯಿರಾಲಾ, ಚಿಕ್ಕ ರಾಷ್ಟ್ರದ ಗೌರವ ಮತ್ತು ಘನತೆ ಎತ್ತಿಹಿಡಿದಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಆದರೆ, ನೇಪಾಳದ ಪರಿಷ್ಕೃತ ನಕ್ಷೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪರಿಷ್ಕೃತ ನಕ್ಷೆಯಲ್ಲಿ ಸೇರ್ಪಡೆಗೊಳಿಸಿರುವ ಎಲ್ಲ ಪ್ರದೇಶಗಳು ಭಾರತಕ್ಕೆ ಸೇರಿದ್ದು. ಈ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಭಾರತ ಪ್ರತಿಪಾದಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಮನೀಷಾ ಕೊಯಿರಾಲಾ ಅವರ ಟ್ವೀಟ್​ನಿಂದ ಸಿಟ್ಟಿಗೆದ್ದಿರುವ ಭಾರತದ ಟ್ವೀಟಿಗರು ಮನೀಷಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net