ಮಾಣಿಕ್ಯ ನಟಿಗೆ ಕಾಸ್ಟಿಂಗ್​ ಕೌಚ್​ ! ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಕಿರಣ್​ ರಾಥೋಡ್​

Kiran Rathod
Published on

ಕನ್ನಡದ ‘ಕ್ಷಣ ಕ್ಷಣ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ‘ಗನ್’ ಹಾಗೂ ‘ಮಾಣಿಕ್ಯ’ ಸಿನಿಮಾಗಳ ವಿಶೇಷ ಹಾಡುಗಳಲ್ಲಿ ಮಿಂಚಿರುವ ನಟಿ ಕಿರಣ್ ರಾಥೋಡ್. ಜತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರೂ, ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಲಾಗದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

‘ಬಾಲಿವುಡ್‌ನಲ್ಲಿ ಹಲವು ಬಾರಿ ಕಾಸ್ಟಿಂಗ್ ಕೌಚ್ ಅನುಭವವಾದ ಕಾರಣ ನಾನು ಮಾನಸಿಕ ಖಿನ್ನೆತೆಗೆ ಒಳಗಾಗಿದ್ದೆ. ಚಿತ್ರರಂಗದ ಸಹವಾಸವೇ ಬೇಡವೆಂದು ತೀರ್ಮಾನಿಸಿ, ಬೇರೆ ಉದ್ಯಮ ಪ್ರಾರಂಭಿಸಲು ಆಲೋಚಿಸಿದ್ದೆ. ಆದರೆ, ಈಗ ಎಲ್ಲ ಬದಲಾಗಿದೆ. ಅವಕಾಶಗಳು ಸಿಗುತ್ತಿವೆ’ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿ ಅವಕಾಶವಿಲ್ಲ ಅಂತ ತಮಿಳಿಗೆ ಹೋದರೆ, ಅಲ್ಲಿಯೂ ಕಿರಣ್‌ಗೆ ಹಲವು ಸಮಸ್ಯೆಗಳು ಎದುರಾದವಂತೆ. ‘ಸಾಲಾಗಿ ಆರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ನಾನು, ಮುಂಬೈನಲ್ಲಿ ಅವಕಾಶಗಳ ಕೊರತೆಯಿಂದ ಮತ್ತೆ ಚೆನ್ನೈನತ್ತ ಮುಖ ಮಾಡಿದೆ. ಅಲ್ಲಿ ನನ್ನ ಗೆಳೆಯರೇ ನನ್ನ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡು ನಾನು ಮತ್ತೆ ಮುಂಬೈಗೆ ಶ್‌ಟಿ ಆದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ತೆರೆಗೆ ಬಂದ ತಮಿಳಿನ ‘ಇಳಮೈ ಊಂಜಲ್’ ಬಳಿಕ ಅವರು ತೆರೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ಏಳು ವರ್ಷಗಳ ಬಳಿಕ ವಿಜಯ್ ನಾಯಕನಾಗಿರುವ, ಲೋಕೇಶ್ ಕನಗರಾಜ್ ನಿರ್ದೇಶಿಸುತ್ತಿರುವ ‘ಲಿಯೊ’ ಮೂಲಕ ಮತ್ತೆ ವಾಪಸ್ಸಾಗಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net