

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಮಂಗಳೂರು ಕೆನರಾ ಕಾಲೇಜು ಆಶ್ರಯದಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ಮೂಲ್ಕಿ ದಯಾನಂದ್ ಕಾಮತ್ ಮೆಮೋರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿ.ವಿ.(ಮಂಗಳೂರು ವಲಯ) ಅಂತರ್ ಕಾಲೇಜು ಪುರುಷರ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡ ಸತತ ಮೂರನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಎಸ್‌ಡಿಎಂ ಸಿಬಿಎಂ ವಿರುದ್ಧ ಫೈನಲ್ ಕಾದಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್‌ಡಿಎಂ ತಂಡವು 78 ರನ್‌ಗಳಿಗೆ ಆಲ್‌ಔಟ್ ಆಯಿತು. ಸೇಕ್ರೆಡ್ ಹಾರ್ಟ್‌ನ ಶಿವಾಂಶು 3 ವಿಕೆಟ್, ಸ್ವಸ್ತಿಕ್, ನಯನ್, ವಿಕಾಸ್ ಮತ್ತು ತುಷಾರ್ ತಲಾ ಒಂದು ವಿಕೆಟ್ ಪಡೆದರು. 79 ರನ್‌ಗಳ ಗುರಿ ಪಡೆದ ಸೇಕ್ರೆಡ್ ಹಾರ್ಟ್ ತಂಡವು 10.1 ಓವರುಗಳಲ್ಲಿ 5 ವಿಕೆಟಿಗೆ ಗುರಿ ಮುಟ್ಟಿತು. ತಂಡದ ಪರವಾಗಿ ನಯನ್ 39(29) ಹಾಗೂ ನೂತನ್ 28(18) ರನ್ ಗಳಿಸಿದರು.
ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಸೇಕ್ರೆಡ್ ಹಾರ್ಟ್‌ನ ನಯನ್ ಸರಣಿಯ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಪಡೆದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಎಸ್.ಡಿ.ಎಂ.ನ ರೆಹನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರೆ, ಫೈನಲ್‌ನಲ್ಲಿ 3 ವಿಕೆಟ್ ಕಿತ್ತ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿವಾಂಶು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.