

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಹಾಸನ, ಸಕಲೇಶಪುರ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಹಾಗೂ ಎಡಕುಮೇರಿ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಎಡಕುಮೇರಿ ಸಮೀಪದ ಕಡಗರವಳ್ಳಿ ಬಳಿ ರೈಲು ಹಳಿಯ ಕೆಳಭಾಗದಲ್ಲಿ ಮಣ್ಣು ಕುಸಿದು ಬಿದ್ದಿದೆ. ಇದರಿಂದ ಮಂಗಳೂರು-ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
ಸುಬ್ರಹ್ಮಣ್ಯ ರೋಡು, ರೈಲು ನಿಲ್ದಾಣದಿಂದ ಮುಂದೆ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಶುಕ್ರವಾರ ಘಟನೆ ನಡೆದಿದ್ದು, ತಕ್ಷಣ ಈ ಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಯಿತು. ರೈಲ್ವೆ ಇಲಾಖಾಧಿಕಾರಿಗಳು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್(16595), ಕಾರವಾರ-ಬೆಂಗಳೂರು ಪಂಚಗಂಗ ಎಕ್ಸ್‌ಪ್ರೆಸ್(16596), ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು(16586), ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್(16512) ರೈಲುಗಳು ಪಥ ಬದಲಿಸಿ ಚಲಿಸಲಿದೆ ಎಂದು ತಿಳಿದು ಬಂದಿದೆ.