ವಿದ್ಯಾರ್ಥಿ ಚಿಕಿತ್ಸೆಗೆ ನೆರವಾದ ಮಂಗಳಮುಖಿಯರು

hbl
Published on

ಹೊನ್ನಾವರ: ತಾಲೂಕಿನಲ್ಲಿ ನೆಲೆಸಿರುವ ಮಂಗಳಮುಖಿಯರು ಅನಾರೋಗ್ಯ ಪೀಡಿತ ದಲಿತ ವಿದ್ಯಾರ್ಥಿ ನಂದನ್ ಎಂಬಾತನ ಚಿಕಿತ್ಸೆಗಾಗಿ ದಾನಿಗಳಿಂದ 65 ಸಾವಿರ ರೂ. ಗಳನ್ನು ಸಂಗ್ರಹಿಸಿ ನೀಡಿದ್ದಾರೆ.

ಜಿಲ್ಲೆಯ ಮಂಗಳಮುಖಿಯರ ಅಂತರಂಗ ಸಂಸ್ಥೆಯ ಸದಸ್ಯರಾದ ಆಯಿಶಾ, ಸುಹಾನಾ, ಉಡುಪಿ ಸಂಧ್ಯಾ, ಸೋನು, ಪಿಂಕಿ, ರೋಶನಿ ಇತರರು 50 ಸಾವಿರ ರೂ. ಸಂಗ್ರಹಿಸಿದ್ದಾರೆ. ಉಳಿದ 15 ಸಾವಿರ ರೂ.ಗಳನ್ನು ಉಡುಪಿ ಜಿಲ್ಲೆಯ ಮಂಗಳಮುಖಿಯರ ಆಶ್ರಯ ಸಮುದಾಯ ಸಂಘಟನೆಯ ಸದಸ್ಯರಾದ ಲಾವಣ್ಯ, ಸಮೀಕ್ಷಾ, ಸಂಜೀವ, ಉಡುಪಿ ಸುದರ್ಶನ್ ಇತರರು ಸಂಗ್ರಹಿಸಿ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net