ಸುಧಾರಿತ ಉಪಕರಣ ಹೊಲಿಗೆ ಯಂತ್ರ ವಿತರಣೆ

gan (12)
Published on

ಕುಂದಾಪುರ: ಗ್ರಾಮೀಣ ಕುಲ ಕಸುಬುದಾರರಿಗೆ ಆರ್ಥಿಕ ನೆರವು ನೀಡಲು ಹಾಗೂ ಸಾವಾಜಿಕವಾಗಿ ಹಿಂದುಳಿದ ಬಡವರ್ಗದ ಜನರಿಗೆ ಗ್ರಾಮಗಳಲ್ಲಿಯೇ ಜೀವನಾಧಾರ ಕಲ್ಪಿಸಲು ಉಚಿತವಾಗಿ ಇಂದು 133 ಫಲಾನುಭವಿಗಳನ್ನು ಆಯ್ಕೆ ವಾಡಲಾಗಿದ್ದು ತಾವು ಇದನ್ನು ಸಮರ್ಪಕವಾಗಿ ಕಿಟ್ ನ್ನು ಉಪಯೋಗಿಸಿಕೊಂಡು ಸ್ವಯಂ ಉದ್ಯೋಗವನ್ನು ವಾಡುವ ಸಲುವಾಗಿ ಈ ಉದ್ದೇಶದಿಂದ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹೊಲಿಗೆ ಯಂತ್ರ ವಿಸ್ತರಿಸಲಾಗುತ್ತಿದೆ ಎಂದು ಶಾಸಕ ಎ. ಕಿರಣ್ ಕುವಾರ್ ಕೊಡ್ಗಿ ಹೇಳಿದರು.

ತಾಲೂಕು ಪಂಚಾಯಿತಿನ ಸಭಾಂಗಣದಲ್ಲಿ ಶನಿವಾರ ನಡೆದ ಗ್ರಾಮೀಣ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣ ಹಾಗೂ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಉಡುಪಿ ಗ್ರಾಮೀಣ ಕೈಗಾರಿಕಾ ವಿಸ್ತರಣಾ ಅಧಿಕಾರಿ ಮಂಜುನಾಥ್ ಹೆಗಡೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net