ಮೊಹಮ್ಮದ್ ಸಿರಾಜ್ ವಿಷಯವಾಗಿ ಬಿಸಿಸಿಐಗೆ ಸಲಹೆ ನೀಡಿದ ಮಾಜಿ ವೇಗಿ ಆರ್‌ಪಿ ಸಿಂಗ್| RP Singh

RP Singh, Mohammed Siraj
Published on

RP Singh: ಓವಲ್ ಟೆಸ್ಟ್‌ನಲ್ಲಿ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ ಭಾರತದ ವೇಗದ ಬೌಲರ್​​ ಮೊಹಮ್ಮದ್ ಸಿರಾಜ್ ಅವರನ್ನು ಶ್ಲಾಘಿಸಿರುವ ಮಾಜಿ ವೇಗಿ ಆರ್‌ಪಿ ಸಿಂಗ್, ಜಸ್ಪ್ರೀತ್ ಬುಮ್ರಾ ಅವರಂತೆಯೇ ಸಿರಾಜ್  ಕೆಲಸದ ಹೊರೆಯನ್ನು ನಿರ್ವಹಿಸುವಂತೆ ಬಿಸಿಸಿಐಗೆ ಸಲಹೆ ನೀಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಸಿಂಗ್​, ವೇಗದ ಬೌಲರ್‌ಗಳು ಕಡಿಮೆ ಸಮಯದಲ್ಲಿ ಹೆಚ್ಚು ಪಂದ್ಯಗಳನ್ನು ಆಡುವುದರಿಂದ ಗಾಯದ ಅಪಾಯ ಹೆಚ್ಚಾಗಿರುತ್ತದೆ, ಸಿರಾಜ್ ಅವರ ಕೆಲಸದ ಹೊರೆ ನಿರ್ವಹಣೆ ಭವಿಷ್ಯದಲ್ಲಿ ಗಾಯಗೊಳ್ಳದಂತೆ ತಡೆಯಲು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.

ಬುಮ್ರಾ ಕೆಲಸದ ಹೊರೆ ನಿರ್ವಹಣೆಯಿಂದಾಗಿ ಏಕದಿನ ಮತ್ತು ಟಿ20 ವಿಶ್ವಕಪ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಲು ಸಾಧ್ಯವಾಗಿದೆ, ಬುಮ್ರಾ ಯಶಸ್ಸಿಗೆ ಸಿರಾಜ್ ಬೆಂಬಲ ನೀಡಿದ್ದಾರೆ.

ಬ್ಯಾಟ್ಸ್‌ಮನ್‌ಗಳಂತೆಯೇ ಬೌಲರ್‌ಗಳಿಗೂ ಪಾಲುದಾರಿಕೆ ಅಗತ್ಯ, ಪಂದ್ಯಗಳಲ್ಲಿ ಒಂದು ಬದಿಯಲ್ಲಿ ಬುಮ್ರಾ, ತಮ್ಮ ವಿಶಿಷ್ಟ ಬೌಲಿಂಗ್​ ಶೈಲಿಯ ಮೂಲಕ ವಿಕೆಟ್‌ ಪಡೆಯುವ ಕೆಲಸ ಮಾಡುತ್ತಾರೆ. ಇನ್ನೊಂದು ಬದಿಯಿಂದ ಸಿರಾಜ್​​ ರನ್​ ನೀಡದೆ ಎದುರಾಳಿ ತಂಡದ ಆಟಗಾರರಿಗೆ ಒತ್ತಡವನ್ನು ಹೆಚ್ಚಿಸುತ್ತಾರೆ. ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಭಾರತ ತಂಡದ ಪ್ರಮುಖ ವೇಗದ ಬೌಲರ್ ಆಗಿರುತ್ತಾರೆ ಎಂದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net