Suicide: ವಾಟ್ಸಪ್ನಲ್ಲಿ ನೋವಿನ ಸಂದೇಶ ಬರೆದು, ಪತ್ನಿ ಹಾಗೂ ಮಗುವನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆಗೆ ವ್ಯಕ್ತಿಯೊಬ್ಬ ಸಾವಿಗೆ ಶರಣಾದ ಘಟನೆ ಉತ್ತರಪ್ರದೇಶ ಬಂದಾ ಜಿಲ್ಲೆಯಲ್ಲಿ ಇತ್ತೀಚಿಗೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಎಸ್.ಸಿ, ಎಸ್.ಟಿ ದೌರ್ಜನ್ಯ ಸಭೆ/ ದುರುಗಳು ಬಂದರೆ ತುರ್ತು ಕ್ರಮ ಕೈಗೂಳ್ಳಿ/ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಸೂಚನೆ
ಜಿಲ್ಲೆಯ ಕೆಲದಿನಗಳಿಂದ ಬಾಗಿಲು ಬಂದ್ ಮಾಡಿದ್ದ ಮನೆಯೊಂದರಲ್ಲಿ ಕೆಟ್ಟವಾಸನೆ ಬರುತ್ತಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಗಂಡ, ಹೆಂಡತಿ ಹಾಗೂ 2 ತಿಂಗಳ ಮಗುವಿನ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಜಿತೇಂದ್ರ, ಪತ್ನಿ ಗೌರ ಹಾಗೂ 2 ತಿಂಗಳ ಮಗು ಎಂದು ಗುರುತಿಸಲಾಗಿದೆ. ಪ್ರಥಾಮಿಕ ತನಿಖೆಯ ಪ್ರಕಾರ, ಪತಿ ಮೊದಲು ತನ್ನ ಪತ್ನಿ ಗೌರ ಮತ್ತು ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆದರೆ, ಮನೆಯಲ್ಲಿ ಯಾವುದೇ ದರೋಡೆ ಅಥವಾ ಇನ್ನಾವುದೇ ಸಂಶಯಪಡುವಂತಹ ಕಳ್ಳತನ ಆಗಿಲ್ಲ. ಘಟನಾ ಸ್ಥಳದಲ್ಲಿ ದೊರೆತ ಮೊಬೈಲ್ ಫೋನ್‌ನಲ್ಲಿ ಜಿತೇಂದ್ರ ತನ್ನ ಮಾನಸಿಕ ಸ್ಥಿತಿ ಮತ್ತು ಕೌಟುಂಬಿಕ ಉದ್ವಿಗ್ನತೆಗಳನ್ನು ಸಂದೇಶಗಳ ಮೂಲಕ ವಿವರಿಸಿದ್ದಾನೆ. ಮುಂದಿನ ಕ್ರಮ ಕೈಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ನಲ್ಲಿ ಬರೆದಿಟ್ಟ ಸಂದೇಶವೇನು?
ಜಿತೇಂದ್ರ ಏಪ್ರಿಲ್ 2024 ರಲ್ಲಿ ವಿವಾಹವಾದರು ಎಂದು ಅವರು ಹೇಳಿದರು. ಮದುವೆಯಾದಾಗಿನಿಂದ, ಪತಿ ಮತ್ತು ಪತ್ನಿಯ ನಡುವೆ ವರದಕ್ಷಿಣೆ ವಿಷಯದಲ್ಲಿ ಜಗಳ ನಡೆಯುತ್ತಿತ್ತು. ಅಲ್ಲದೆ, ತನ್ನ ಅತ್ತೆ ಮಾವನಿಂದ ಕೂಡ ನೋವು ಅನುಭವಿಸುತ್ತಿದ್ದ. ದಿನೆದಿನೇ ಸಮಸ್ಯೆ ದೊಡ್ಡಗುತ್ತಾ ಸಾಗುತ್ತಿತ್ತೆ ವಿನಾ ಶಮನವಾಗಿರಲಿಲ್ಲ. ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಮಾನಸಿಕ ಸ್ಥಿತಿ ಮತ್ತು ಕೌಟುಂಬಿಕ ಉದ್ವಿಗ್ನತೆಗಳನ್ನು ಸಂದೇಶಗಳ ಮೂಲಕ ವಿವರಿಸಿದ್ದಾನೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
ಕೂಲರ್‌ನಿಂದ ವಿದ್ಯುತ್ ಸ್ಪರ್ಶಿಸಿ ಮಲಗಿದ್ದಲ್ಲೇ ತಾಯಿ ಮತ್ತು ಮಗಳು ಸಾವು! cooler
ವಾಟ್ಸಾಪ್ ಮೂಲಕ 5 ಲಕ್ಷ ರೂ. ಮೌಲ್ಯದ ಕೊಕೇನ್ ಆರ್ಡರ್! ವೈದ್ಯೆ ಅರೆಸ್ಟ್Doctor