ಕರೊನಾದಿಂದ ಸತ್ತ 300ಕ್ಕೂ ಹೆಚ್ಚು ಜನರ ಶವಸಂಸ್ಕಾರ ಮಾಡಿದ್ದವ ಕೊನೆಗೆ ಕೋವಿಡ್​ಗೇ ಬಲಿಯಾದ!

Untitled-1
Published on

ಹರಿಯಾಣ: ಕೋವಿಡ್​ನಿಂದ ಸತ್ತವರ ಶವಗಳು ಮನೆಯವರಿಗೆ ಸಿಗುವುದೇ ಅಪರೂಪ. ಅದರಲ್ಲೂ ಹಾಗೆ ಸತ್ತವರ ಅಂತ್ಯಸಂಸ್ಕಾರ ಮನೆಯವರಿಂದ ನಡೆಯುವುದು ಕೂಡ ಅತಿವಿರಳ. ಅದೆಷ್ಟೋ ಕೋವಿಡ್​ ಶವಗಳ ಅಂತ್ಯಸಂಸ್ಕಾರವನ್ನು ಎಲ್ಲೋ ಇನ್ಯಾರೋ ಮಾಡಿಬಿಟ್ಟಿರುತ್ತಾರೆ. ಹೀಗೆ 300ಕ್ಕೂ ಅಧಿಕ ಕೋವಿಡ್​ ಶವಗಳ ಅಂತಿಮಸಂಸ್ಕಾರ ಮಾಡಿದ್ದವ ಕೊನೆಗೆ ಕರೊನಾ ಸೋಂಕಿಗೇ ಬಲಿಯಾಗಿದ್ದಾನೆ.

ಹರಿಯಾಣದ 43 ವರ್ಷ ವಯಸ್ಸಿನ ಪ್ರವೀಣ್​ ಕುಮಾರ್​ಗೆ ಮೊನ್ನೆಮೊನ್ನೆಯಷ್ಟೇ ಕೋವಿಡ್​ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಆಮ್ಲಜನಕ ಮಟ್ಟ ಕುಸಿದಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಎರಡು ದಿನಗಳಲ್ಲಿ ದೇಹದಲ್ಲಿನ ಆಮ್ಲಜನಕ ಪ್ರಮಾಣ ಕ್ಷೀಣಿಸುತ್ತಲೇ ಇದ್ದಿದ್ದರಿಂದ ಅವರು ನಿನ್ನೆ ರಾತ್ರಿ ನಿಧನರಾದರು.

ಹರಿಯಾಣದ ಹಿಸರ್ ಮುನಿಸಿಪಲ್ ಕಾರ್ಪೋರೇಷನ್​ನ ಕೋವಿಡ್​ ಶವಗಳ ಅಂತ್ಯಸಂಸ್ಕಾರ ಕುರಿತ ಟೀಮ್​ ನೇತೃತ್ವ ವಹಿಸಿದ್ದ ಪ್ರವೀಣ್, ಕಳೆದ ಒಂದು ವರ್ಷದಿಂದ ಕೋವಿಡ್​ನಿಂದ ಮೃತರಾದ 300ಕ್ಕೂ ಹೆಚ್ಚು ಮಂದಿಯ ಶವಗಳಿಗೆ ಗೌರವಯುತ ಅಂತ್ಯಸಂಸ್ಕಾರ ನಡೆಸಿದ್ದರು. ಹಿಸರ್ ಮುನಿಸಿಪಲ್ ಕಾರ್ಪೋರೇಷನ್​ನ ಸಫಾಯಿ ಕರ್ಮಾಚಾರಿ ಸಂಘದ ಅಧ್ಯಕ್ಷರಾಗಿದ್ದ ಪ್ರವೀಣ್ ಪಾರ್ಥಿವ ಶರೀರವನ್ನು ಹಿಸರ್​ನ ರಿಷಿನಗರ್ ಸ್ಮಶಾನದಲ್ಲಿ ಇಂದು ಕೋವಿಡ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಅಂತ್ಯಸಂಸ್ಕಾರ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net