More

    ಆಟದ ಮಧ್ಯೆ ಕೊಹ್ಲಿಯತ್ತ ನುಗ್ಗಿ ಅಪ್ಪಿಕೊಳ್ಳಲು ಯತ್ನಿಸಿದ ವ್ಯಕ್ತಿ ಪೊಲೀಸರ ಮುಂದೆ ಹೇಳಿದ್ದಿಷ್ಟು…

    ಅಹಮದಾಬಾದ್​: ವಿಶ್ವಕಪ್​ ಫೈನಲ್ ಪಂದ್ಯದ ವೇಳೆ ಭದ್ರತಾ ಉಲ್ಲಂಘನೆ ವರದಿಯಾಗಿದೆ. ಸ್ವತಂತ್ರ ಪ್ಯಾಲೆಸ್ತೀನ್​ ಎಂಬ ಬರಹವುಳ್ಳ ಟೀ ಶರ್ಟ್​ ಧರಿಸಿದ ವ್ಯಕ್ತಿಯೊಬ್ಬ ಪಂದ್ಯ ವೇಳೆ ಕ್ರೀಡಾಂಗಣಕ್ಕೆ ನುಸುಳಿ ವಿರಾಟ್​ ಕೊಹ್ಲಿ ಅವರನ್ನು ಅಪ್ಪಿಕೊಳ್ಳಲು ಯತ್ನಿಸುವ ಮೂಲಕ ಆತಂಕದ ವಾತಾವರಣವನ್ನು ಸೃಷ್ಟಿಸಿದರು.

    ಕೆಂಪು ಬಣ್ಣದ ಶಾರ್ಟ್ಸ್ ಧರಿಸಿದ್ದ ವ್ಯಕ್ತಿ ತಾನು ಧರಿಸಿದ್ದ ಟೀ ಶರ್ಟ್ಸ್​ ಮುಂಭಾಗದಲ್ಲಿ ಪ್ಯಾಲೆಸ್ತೀನ್ ಮೇಲಿನ ಬಾಂಬ್​ ದಾಳಿ ನಿಲ್ಲಿಸಿ ಮತ್ತು ಹಿಂಭಾಗದಲ್ಲಿ ಸ್ವತಂತ್ರ ಪ್ಯಾಲೆಸ್ತೀನ್ ಎಂಬ ಸಂದೇಶ ಹೊಂದಿದ್ದರು. ಅಲ್ಲೆ, ಪ್ಯಾಲೆಸ್ತೀನ್​ ಬಣ್ಣದ ಫೇಸ್​ ಮಾಸ್ಕ್​ ಸಹ ಧರಿಸಿದ್ದರು.

    ಅ.7ರಂದು 5 ಸಾವಿರ ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ದಿಢೀರನೇ ದಾಳಿ ಮಾಡಿರುವುದಕ್ಕೆ ಪ್ರತಿಯಾಗಿ ಇಸ್ರೇಲ್​ ಸೇನೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿದ್ದು, ಇಸ್ರೇಲ್​ ಮತ್ತು ಹಮಾಸ್​ ನಡುವಿನ ಯುದ್ಧ ಆರಂಭವಾಗಿ ಒಂದೂವರೆ ತಿಂಗಳ ಸಮೀಪಕ್ಕೆ ಬಂದಿದೆ. ಪ್ಯಾಲೆಸ್ತೀನ್​ನಲ್ಲಿ ಹಮಾಸ್​ ಹೊರತುಪಡಿಸಿ ಸಾಮಾನ್ಯ ನಾಗರಿಕರ ಮೇಲಿನ ದಾಳಿಯ ವಿರುದ್ಧ ಜಗತ್ತಿನಾದ್ಯಂತ ಭಾರೀ ಖಂಡನೆಗಳು ವ್ಯಕ್ತವಾಗುತ್ತಿವೆ.

    ಈ ಬಗ್ಗೆ ಗಮನ ಸೆಳೆಯಲು ವ್ಯಕ್ತಿಯೊಬ್ಬ ಇಂದು ನಡೆಯುತ್ತಿರುವ ಸೆಮಿಫೈನಲ್​ ಪಂದ್ಯದ ವೇಳೆ ಪ್ಯಾಲೆಸ್ತೀನ್​ ಬಾವುಟ ಹಿಡಿದು ಕ್ರೀಡಾಂಗಣದ ಒಳಗಡೆ ನುಸುಳಿ ಆತಂಕದ ವಾತಾವರಣ ಸೃಷ್ಟಿ ಮಾಡಿದರು. ಕೊಹ್ಲಿ ಸಮೀಪಕ್ಕೆ ತೆರಳಿದ್ದ ವ್ಯಕ್ತಿ, ಅಪ್ಪಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಆಗಮಿಸಿ ವ್ಯಕ್ತಿಯನ್ನು ಕರೆದೊಯ್ದರು. ಸದ್ಯ ಆ ವ್ಯಕ್ತಿ ಚಂದಖೇಡಾ ಪೊಲೀಸ್ ಠಾಣೆಯಲ್ಲಿದ್ದಾರೆ.

    ಮೈದಾನಕ್ಕೆ ನುಗ್ಗಿದ ವ್ಯಕ್ತಿಯನ್ನು ಜಾನ್ಸನ್​ ವೇಯ್ನೆ ಎಂದು ಗುರುತಿಸಲಾಗಿದೆ. ನಾನು ಆಸ್ಟ್ರೇಲಿಯಾ ಮೂಲದವನು. ವಿರಾಟ್​ ಕೊಹ್ಲಿ ಭೇಟಿಯಾಗಲು ಕ್ರೀಡಾಂಗಣದ ಒಳಗಡೆ ನುಸುಳಿದೆ ಮತ್ತು ಪ್ಯಾಲೆಸ್ತೀನ್‌ನಲ್ಲಿ ನಡೆದ ಯುದ್ಧದ ವಿರುದ್ಧ ಪ್ರತಿಭಟನೆ ನಡೆಸಲಾಯಿತು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

    ಪಿಚ್ ಆಕ್ರಮಣದಿಂದಾಗಿ ಪಂದ್ಯವನ್ನು ಸ್ವಲ್ಪ ಹೊತ್ತು ಸ್ಥಗಿತಗೊಳಿಸಲಾಯಿತು. ಭದ್ರತಾ ಅಧಿಕಾರಿಗಳು ಜಾನ್ಸನ್​ ವೇಯ್ನೆಯನ್ನು ಬಂಧಿಸಿದ ನಂತರ, ಪಂದ್ಯವನ್ನು ಪುನರಾರಂಭಿಸಲಾಯಿತು. ಅಹಮದಾಬಾದ್‌ನ ಮೊಟೆರಾದಲ್ಲಿರುವ ಬೃಹತ್ ನರೇಂದ್ರ ಮೋದಿ ಕ್ರೀಡಾಂಗಣವು ವಿಶ್ವಕಪ್​ ಫೈನಲ್​ ಹಿನ್ನೆಲೆಯಲ್ಲಿ ತುಂಬಿ ತುಳುಕುತ್ತಿದೆ. (ಏಜೆನ್ಸೀಸ್​)

    ವಿಶ್ವಕಪ್​ ಫೈನಲ್​: ಕೊಹ್ಲಿ-ರಾಹುಲ್​ ಅರ್ಧಶತಕ, ಆಸಿಸ್​ಗೆ 241 ರನ್​ಗಳ ಗುರಿ ನೀಡಿದ ಭಾರತ

    ತಿರುಮಲೆಯಲ್ಲಿ ಪುಷ್ಪಯಾಗ ಅದ್ಧೂರಿ : ಮಲೆಯಪ್ಪಸ್ವಾಮಿ ಉತ್ಸವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts