ಯುವತಿಯರಿಗೆಲ್ಲ ಫ್ರೀ ಡ್ರಗ್ಸ್​ ಆಫರ್​! ಬದಲಾಗಿ ಕೇಳಿದ್ದೇನೆಂದು ಗೊತ್ತಾದರೆ ಶಾಕ್​ ಆಗ್ತೀರ

drugs
Published on

ನವದೆಹಲಿ: ಮತ್ತು ತರಿಸುವ ಡ್ರಗ್ಸ್​ ದುಬಾರಿ ಬೆಲೆಯಿದೆ. ಅದಕ್ಕೆ ಹಣ ಒಟ್ಟು ಮಾಡಲೆಂದೇ ಅನೇಕ ವ್ಯಸನಿಗಳು ಕೆಟ್ಟ ಕೆಲಸಗಳಿಗೆ ಕೈ ಹಾಕಿರುವ ಘಟನೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಯುವತಿಯರಿಗೆ ಫ್ರೀಯಾಗಿ ಡ್ರಗ್ಸ್​ ಕೊಡುತ್ತಿದ್ದ. ಭಾರತೀಯರಿಗೆ ಡ್ರಗ್ಸ್​ ಹಂಚದ ಆತ ಬಾಂಗ್ಲಾದೇಶಿ ಯುವತಿಯರಿಗೆ ಡ್ರಗ್ಸ್​ ಹಂಚುತ್ತಿದ್ದ ಹಿಂದಿತ್ತು ಬೇರೆಯದ್ದೇ ಒಂದು ಉದ್ದೇಶ.

ಮಧ್ಯಪ್ರದೇಶದ ವಿಜಯನಗರ ವ್ಯಾಪ್ತಿಯಲ್ಲಿದ್ದ ಸಾಗರ್​ ಜೈನ್​ ಬಾಂಗ್ಲಾದೇಶದ ಯುವತಿಯರಿಗೆ ಫ್ರೀಯಾಗಿ ಡ್ರಗ್ಸ್​ ಹಂಚುತ್ತಿದ್ದ. ಮೊದಮೊದಲು ಉಚಿತವಾಗಿ ಡ್ರಗ್ಸ್​ ಹಂಚುತ್ತಿದ್ದ ಆತ ನಂತರ ಅದಕ್ಕೆ ವಿಪರೀತ ಬೆಲೆ ಹೇಳುತ್ತಿದ್ದನಂತೆ. ಆ ಹಣವನ್ನು ಯುವತಿಯರು ಕೊಡಲಾಗದಿದ್ದಾಗ ಅವರನ್ನು ಭಾರತಕ್ಕೆ ಕರೆಸಿಕೊಳ್ಳುತ್ತಿದ್ದ. ವಿಜಯನಗರಕ್ಕೆ ಕರೆಸಿಕೊಂಡು ಅವರಿಗೆ ಡ್ರಗ್ಸ್​ ಕೊಟ್ಟು, ಸೆಕ್ಸ್​ ದಂಧೆಗೆ ಬಳಸಿಕೊಳ್ಳುತ್ತಿದ್ದ. ಇದೇ ರೀತಿ ಸುಮಾರು 15ಕ್ಕೂ ಹೆಚ್ಚು ಯುವತಿಯರಿಗೆ ಆತ ಮೋಸ ಮಾಡಿದ್ದಾನೆ.

ವಿಜಯನಗರ ಭಾಗದಲ್ಲಿ ಇಂತಹ ಘಟನೆ ನಡೆಯುತ್ತಿರುವ ಸುಳಿವು ಸಿಕ್ಕ ಪೊಲೀಸರು ಸಾಗರ್​ಗಾಗಿ ಬಲೆ ಬೀಸಿದ್ದಾರೆ. ಒಂದು ತಿಂಗಳ ಹಿಂದೆ ಆತನ ಮನೆ ಮತ್ತು ಆತನಿಗೆ ಸಂಬಂಧಪಟ್ಟ ಕೆಲ ಸ್ಥಳಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಈ ಸಮಯದಲ್ಲಿ ಆತ ಪೊಲೀಸರಿಂದ ತಪ್ಪಿಸಿಕೊಂಡು ದೆಹಲಿ ಸೇರಿಬಿಟ್ಟಿದ್ದಾನೆ.

ದೆಹಲಿಯ ತನ್ನ ಗೆಳತಿ ಮನೆಯಲ್ಲಿ ಅಡಗಿದ್ದ ಸಾಗರ್​ನನ್ನು ಬುಧವಾರದಂದು ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಸಹಾಯದೊಂದಿಗೆ ವಿಜಯನಗರ ಪೊಲೀಸರು ಸಾಗರ್​ನನ್ನು ಹುಡುಕಿದ್ದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net