ಬೆಂಗಳೂರು: ನಮ್ಮ ಮೆಟ್ರೋ ರೈಲು ಹಳಿಗೆ ಹಾರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ 2.13ಕ್ಕೆ ನಡೆದಿದೆ.
ಇದನ್ನೂ ಓದಿ: ಪಾಕಿಸ್ತಾನ ಮಾನವೀಯತೆಗೆ ಬಡಿದ ಕ್ಯಾನ್ಸರ್: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಾಗ್ದಾಳಿ
ಮೆಟ್ರೋ ಹಳಿಗೆ ಹಾರಿದ್ದ ವ್ಯಕ್ತಿಯನ್ನು ಸದ್ಯ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಲ್ಲಘಟ್ಟ ನಿಲ್ದಾಣದಿಂದ ಕೆಂಗೇರಿ, ಮೆಜೆಸ್ಟಿಕ್ ನಿಲ್ದಾಣದಿಂದ ವೈಟ್ಫೀಲ್ಡ್ ನಡುವೆ ಮೆಟ್ರೋ ಸಂಚಾರ ಮಾಡುತ್ತದೆ. ಘಟನೆ ನಂತರ ಜ್ಞಾನಭಾರತಿ ಮೆಟ್ರೋ ನಿಲ್ದಾಣದಲ್ಲೇ ರೈಲು ನಿಂತಿದ್ದು, ಮೈಸೂರು ರಸ್ತೆ ಮೆಟ್ರೋ ನಿಲ್ದಾಣ-ಮೆಜೆಸ್ಟಿಕ್ ನಡುವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರದಾಡಿದ್ದಾರೆ.
ಸದ್ಯ ಮೆಟ್ರೋ ಹಳಿ ಮೇಲೆ ಬಿದ್ದ ವ್ಯಕ್ತಿಯನ್ನು ಬಿಹಾರ ಮೂಲದ ಶ್ರೀ ಸಿದ್ದಾರ್ಥ್ ಎಂದು ಗುರುತಿಸಲಾಗಿದೆ. ಇಂದು (ಮಂಗಳವಾರ) ಮಧ್ಯಾಹ್ನ 2 ಗಂಟೆ 13 ನಿಮಿಷದ ಹೊತ್ತಲ್ಲಿ ಜ್ಞಾನಭಾರತಿ ಮೆಟ್ರೋ ನಿಲ್ದಾಣದಕ್ಕೆ ರೈಲು ಎಂಟ್ರಿಯಾಗಿತ್ತು. ರೈಲು ಬರೋದನನ್ನೇ ಕಾಯುತ್ತಿದ್ದ ಶ್ರೀ ಸಿದ್ದಾರ್ಥ್ ಎಂಬ ಯುವಕ ನೋಡ ನೋಡ್ತಿದ್ದಂತೆ ಟ್ರ್ಯಾಕ್ ಮೇಲೆ ಹಾರಿದ್ದಾರೆ. ಘಟನೆಯ ನಂತರ ತಕ್ಷಣವೇ ಎಮರ್ಜೆನ್ಸಿ ಟ್ರಿಪ್ ಸಿಸ್ಟಮ್ ಇಟಿಎಸ್ ಅನ್ನು ಸ್ಟೇಷನ್ ಕಂಟ್ರೋಲರ್ ಮತ್ತು ತಂಡವು ಬಳಸಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿ ವ್ಯಕ್ತಿಯನ್ನು ರಕ್ಷಿಸಲಾಯಿತು.
ಮಾಹಿತಿಯ ಪ್ರಕಾರ ಯಾವುದೇ ಗಾಯಗಳು ವರದಿಯಾಗಿಲ್ಲ. ನೇರಳೆ ಮಾರ್ಗದಲ್ಲಿ ರೈಲು ಸೇವೆಗಳು 14.31 ಗಂಟೆಗೆ ಪುನರಾರಂಭಿಸಲಾಯಿತು, 14.13 ಗಂಟೆಯಿಂದ 14.30ಗಂಟೆಯವರೆಗೆ ಚಲ್ಲಘಟ್ಟ ನಿಲ್ದಾಣದ ಬದಲು ಮೈಸೂರು ರಸ್ತೆ ನಿಲ್ದಾಣದ ವರೆಗೆ 2 ರೈಲುಗಳು ಶಾರ್ಟ್ ಲೂಪ ಕಾರ್ಯನಿರ್ವಹಿಸಿದವು ಎನ್ನಲಾಗಿದೆ.
ಛತ್ತಿಸಗಢ: ಕೇಂದ್ರ ಸಚಿವ ಕುಮಾರಸ್ವಾಮಿಗೆ ಬಿಲಾಯ್ ಕನ್ನಡ ಸಂಘದ ಸದಸ್ಯರಿಂದ ಅಭಿನಂದನೆ!