ವೃದ್ಧನನ್ನು ಥಳಿಸಿ, ಮೂತ್ರ ನೆಕ್ಕುವಂತೆ ಬಲವಂತ! ಆರೋಪಿ ಬಂಧನ..urine

man thrashed forced to lick his urine in UP temple
Published on

ಉತ್ತರಪ್ರದೇಶ: ವೃದ್ಧ ವ್ಯಕ್ತಿಯೊಬ್ಬರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು ಮಾತ್ರವಲ್ಲದೇ, ಬಲವಂತವಾಗಿ ಮೂತ್ರ ( urine)  ನೆಕ್ಕಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?: ಲಕ್ನೋ ಬಳಿಯ ಕಾಕೋರಿ ಪಟ್ಟಣದಲ್ಲಿ ರಾಂಪಾಲ್ ಎಂದು ಗುರುತಿಸಲಾದ 65 ವರ್ಷದ ವ್ಯಕ್ತಿಯೊಬ್ಬ ಹತಾ ಹಜರತ್ ಸಹಾಬ್ ನಿವಾಸಿ. ಈ ವೃದ್ಧ ದೀರ್ಘಕಾಲದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಸೋಮವಾರ, ಅವರು ಶೀತ್ಲಾ ಮಾತಾ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಅವರ ಅನಾರೋಗ್ಯದಿಂದಾಗಿ ನಿಯಂತ್ರಣ ತಪ್ಪಿ ಆವರಣದ ಬಳಿ ಮೂತ್ರ ವಿಸರ್ಜನೆ ಮಾಡಿದರು.

ಸ್ಥಳೀಯ ನಿವಾಸಿ ಸ್ವಾಮಿಕಾಂತ್ ಅಲಿಯಾಸ್ ಪಮ್ಮು ಎಂದು ಗುರುತಿಸಲಾದ ಆರೋಪಿಯು ಘಟನೆಯನ್ನು ಗಮನಿಸಿದ ಕೂಡಲೇ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದನು. ರಾಂಪಾಲ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ದೇವಾಲಯವನ್ನು ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ, ದೇವಾಲಯವನ್ನು ಶುದ್ಧೀಕರಿಸುವ" ಹೆಸರಿನಲ್ಲಿ ವೃದ್ಧನನ್ನು ಮೂತ್ರ ನೆಕ್ಕುವಂತೆ ಒತ್ತಾಯಿಸಿದನೆಂದು ಆರೋಪಿಸಲಾಗಿದೆ. ನಂತರ ಆರೋಪಿಗಳು ರಾಂಪಾಲ್ ಅವರನ್ನು ನೆಲ ಒರೆಸುವಂತೆ ಮಾಡಿ, ಕಾಕೋರಿಯ ಶೀತ್ಲಾ ದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.

ಅನಾರೋಗ್ಯದ ಕಾರಣ ಆಕಸ್ಮಿಕವಾಗಿ ದೇವಾಲಯದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ನಂತರ ಹಲ್ಲೆ ನಡೆಸಿ, ಮೂತ್ರ ನೆಕ್ಕುವಂತೆ ಒತ್ತಾಯಿಸಲಾಗಿದೆ. ಜಾತಿ ನಿಂದನೆ ಮಾಡಿದ್ದಾರೆ ಎಂದು ವೃದ್ಧ ರಾಂಪಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಕೋರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಈ ಅಮಾನವೀಯ ಪ್ರಕರಣಗಳು ಹೊಸದೇನಲ್ಲ. ಹಿಂದೆಯೂ ಇದೇ ರೀತಿಯ ನಿದರ್ಶನಗಳು ನಡೆದಿವೆ, ಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net