ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದವನ ರಕ್ತ ಹೀರಿದ ಕ್ರೂರಿ!; ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಾರಿ

Crime
Published on

ಚಿಕ್ಕಬಳ್ಳಾಪುರ: ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದ ವ್ಯಕ್ತಿಯ ರಕ್ತವನ್ನು ಹೀರಿ ಕ್ರೌರ್ಯ ಮೆರೆದವನೊಬ್ಬ, ಆ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಈ ಕ್ರೂರ ಘಟನೆ ನಡೆದಿದ್ದು, ರಕ್ತ ಹೀರಿದ ವ್ಯಕ್ತಿ ಚಿಂತಾಮಣಿಯ ಬಟ್ಲಹಳ್ಳಿ ಗ್ರಾಮದ ನಿವಾಸಿ ವಿಜಯ್ ಎಂದು ಗುರುತಿಸಲಾಗಿದೆ. ಈತ ರಕ್ತ ಹೀರಿ ಕ್ರೌರ್ಯ ಮೆರೆದಿರುವ ವಿಡಿಯೋ ವೈರಲ್​ ಆದ ಬಳಿಕ ಪರಾರಿಯಾಗಿ, ತಲೆಮರೆಸಿಕೊಂಡಿದ್ದಾನೆ.

ಕತ್ತು ಸೀಳಲ್ಪಟ್ಟು ಒದ್ದಾಡುತ್ತಿದ್ದ ವ್ಯಕ್ತಿ ಚೇಳೂರಿನ ನಿವಾಸಿ ಮಾರೇಶ್. ಯಾರು ಕತ್ತು ಕೊಯ್ದಿದ್ದು, ಯಾವ ಕಾರಣಕ್ಕೆ, ಆಗಿದ್ದೇನು ಎಂಬಿತ್ಯಾದಿ ವಿವರ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net