

ರಾಂಚಿ: ಆಘಾತಕಾರಿ ಘಟನೆಯೊಂದರಲ್ಲಿ 10 ರೂ. ಕೇಳಿದ ಎಂಬ ಕಾರಣಕ್ಕೆ ತಂದೆಯೇ ತನ್ನ ಮಗನ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಜಾರ್ಖಂಡ್ನ ಚತ್ರ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯು ಬಶಿಷ್ಟನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕರೈಲಿಬಾರ್ ಪ್ರದೇಶದಲ್ಲಿ ನಡೆದಿದ್ದು, ಮೃತ ದುರ್ದೈವಿಯನ್ನು ಪಪ್ಪು ಕುಮಾರ್(12), ಬಂಧಿತ ಆರೋಪಿಯನ್ನು ಬಿಲೇಶ್ ಭೂಯಾನ್(48) ಎಂದು ಗುರುತಿಸಲಾಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಬಶಿಷ್ಟನಗರ ಪೊಲೀಸ್ ಠಾಣಾಧಿಕಾರಿ ಗುಲಾಂ ಸರ್ವಾರ್ ಘಟನೆಯೂ ಬೆಳಗ್ಗೆ 9 ಘಂಟೆ ಸುಮಾರಿಗೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಬಾಲಕನ ಪೋಷಕರಿಬ್ಬರು ಜಗಳವಾಡುತ್ತಿದ್ದರು. ಈ ವೇಳೆ ಪಪ್ಪು ಕುಮಾರ್ ತನ್ನ ತಂದೆಯ ಬಳಿ 10 ರೂ. ಕೇಳಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿಯೂ ತನ್ನ ಮಗನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಮೃತ ಬಾಲಕನ ಸಹೋದರಿ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮನೆಗ ವಾಪಸ್ ಆದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಆಕೆ ಅಲಾರಾಮ್ ಹೊಡೆದು ವಿಚಾರವನ್ನು ನೆರೆ ಹೊರೆಯವರಿಗೆ ತಿಳಿಸಿದ್ದಾಳೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಬಶಿಷ್ಟನಗರ ಪೊಲೀಸ್ ಠಾಣಾಧಿಕಾರಿ ಗುಲಾಂ ಸರ್ವಾರ್ ತಿಳಿಸಿದ್ದಾರೆ.