VIDEO| ಚಲಿಸುತ್ತಿರೋ ಕಾರಿನ ಬಾನೆಟ್ ಮೇಲೆಯೇ ಸ್ಟಂಟ್‌; ಯುವಕನ ಡ್ರೈವಿಂಗ್ ಲೈಸೆನ್ಸ್ ಅಮಾನತು!

car
Published on

ನವದೆಹಲಿ: ಯುವಕರು ಇಂದು ಅಪಾಯಕಾರಿ ಸಾಹಸಗಳಿಗೆ ಕೈ ಹಾಕುವ ಮೂಲಕವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಲ್ಲೊಬ್ಬ ಯುವಕ ಚಲಿಸುತ್ತಿರುವ ಕಾರಿನ ಬಾನೆಟ್ ಮೇಲೆ ಕುಳಿತು ಸ್ಟಂಟ್‌ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

ಗೌತಮ್ ಬುದ್ಧ ನಗರದಲ್ಲಿ ವ್ಯಕ್ತಿಯೊಬ್ಬ ಚಲಿಸುತ್ತಿರುವ ಕಾರ್​ ಮೇಲೆ ಕುಳಿತು ರಸ್ತೆಯುದ್ದಕ್ಕೂ ಸ್ಟಂಟ್‌ ಮಾಡುತ್ತಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೆ ಪೊಲೀಸರು ಆತನ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಿದ್ದಾರೆ.

ಇದು ಯುಪಿ ನೋಂದಾಯಿತ ಕಾರು,  ವಾಹನದ ಒಳಗೆ ಆರಾಮದಾಯಕ ಪ್ರಯಾಣ ಮಾಡುವ ಬದಲಾಗಿ ಚಲಿಸುವ ಕಾರಿನ ಬಾನೆಟ್ ಮೇಲೆ ಕುಳಿತುಕೊಂಡು ಸರ್ಕಸ್‌ಗೆ ಮಾಡಿದ್ದಾನೆ.

ಈ ಅಪಾಯಕಾರಿ ಸ್ಟಂಟ್ ಮಾಡಿದ ಯುವಕನ ಡ್ರೈವಿಂಗ್ ಲೈಸೆನ್ಸ್​​ ಅಮಾನತುಗೊಳಿಸುವುದರ ಜತೆಗೆ ಯುವಕನಿಗೆ 26,000 ರೂ. ದಂಡ ವಿಧಿಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದೇವೆ ತನಿಖೆ ಮಾಡುತ್ತೇವೆ ಎಂದು ಪೊಲೀಸ್​​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net