92 ವರ್ಷಗಳ ಹಿಂದಿನ ಪಾಸ್​​ಪೋರ್ಟ್​ ಹೇಗಿದೆ ನೋಡಿ…!

Viral Photo
Published on

ನವದೆಹಲಿ: ಕಾಲ ಬದಲಾಗಿದೆ. ಮನೆಯ ಹಿರಿಯರು ಬಳಸುತ್ತಿದ್ದ ವಸ್ತುಗಳಿಗೂ, ಇಂದಿನ ತಲೆಮಾರಿನ ಜನರು ಬಳಸುವ ವಸ್ತುಗಳಿಗೂ ಸಾಕಷ್ಟು ಬದಲಾವಣೆಯಾಗಿವೆ. ಹೀಗಿದ್ದಾಗ ಪುರಾತನ ಕಾಲದ ವಸ್ತುಗಳ ಫೋಟೋಗಳು ಆಗಾಗ್ಗೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ 1983ನೇ ಇಸವಿಯ ರಾಯಲ್​ ಎನ್​ಫೀಲ್ಡ್​ ಬುಲೆಟ್ ಬೈಕ್​ನ ಬಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ 100 ಬ್ರಿಟೀಷರ ಕಾಲದ 92 ವರ್ಷಗಳ ಹಿಂದಿನ ಪಾಸ್​ಪೋರ್ಟ್​​ನ ಫೋಟೋ ಸಾಕಷ್ಟು ವೈರಲ್ ಆಗುತ್ತಿದೆ.

ಅನ್ಶುಮಾನ್ ಸಿಂಗ್ ಎಂಬುವವರು ತಮ್ಮ ಅಜ್ಜನ ಪಾಸ್​​ಪೋರ್ಟ್​ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತದಲ್ಲಿ ಬ್ರಿಟಿಷ್ ಆಡಳಿತ ಇದ್ದಾಗಿನ ಪಾಸ್​​ಪೋರ್ಟ್​ ಇದಾಗಿದ್ದು, 1931ರಲ್ಲಿ ಅನ್ಶುಮಾನ್ ಸಿಂಗ್ ಅವರ ಅಜ್ಜ ಪಡೆದುಕೊಂಡಿದ್ದಾರೆ. ಈ ಪಾಸ್​ಪೋರ್ಟ್​ನಲ್ಲಿ ಭಾರತದಿಂದ ಕೀನ್ಯಾದ ಕಾಲೋನಿಗಳಿಗೆ ಭೇಟಿ ನೀಡಿರುವುದು ದಾಖಲಾಗಿದೆ.

92 ವರ್ಷ ಹಳೆಯದಾದ ಈ ಪಾಸ್​ಪೋರ್ಟ್​ ಫೋಟೋ ಟ್ವಿಟರ್​ನಲ್ಲಿ ವೈರಲ್ ಆಗುತ್ತಿದ್ದ ಸಾಕಷ್ಟು ಜನರು ಕಮೆಂಟ್ ಮಾಡುತ್ತಿದ್ದಾರೆ. ಅನ್ಶುಮಾನ್ ಸಿಂಗ್ ಮಾಡಿರುವ ಈ ಪೋಸ್ಟ್​ನ್ನು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ. ಇಷ್ಟು ಹಳೆಯದಾದ ಪಾಸ್​​ಪೋರ್ಟ್ ಎಲ್ಲಿ ಸಿಕ್ಕಿತು? ಇಷ್ಟು ವರ್ಷ ಹೇಗೆ ಜೋಪಾನವಾಗಿ ಇಟ್ಟುಕೊಂಡಿದ್ದೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net