ಸಾಗರದ ಭಜರಂಗದಳ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…!

ಸಾಗರದಲ್ಲಿ ಹತ್ಯೆ ಪ್ರಕರಣ
Published on

ಶಿವಮೊಗ್ಗ: ಸಾಗರದಲ್ಲಿ ಭಜರಂಗದಳದ ಕಾರ್ಯಕರ್ತನ ಹತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಶಿವಮೊಗ್ಗದ ಎಸ್​ಪಿ ಜಿ.ಕೆ.ಮಿಥುನ್ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಸಾಗರದಲ್ಲಿ ನಡೆದಿರುವ ಭಜರಂಗದಳದ ಕಾರ್ಯಕರ್ತನ ಮೇಲೆ ದಾಳಿ ವೈಯಕ್ತಿಕವಾದುದು. ಬಜರಂಗದಳ ಕಾರ್ಯಕರ್ತ ಸುನಿಲ್ ಕಳೆದ ನಾಲ್ಕೈದು ತಿಂಗಳಿನಿಂದ ಸಮೀರ್ ಸಹೋದರಿಗೆ ಚುಡಾಯಿಸುತ್ತಿದ್ದ. ಈ ಸಂಬಂಧ ಸಮೀರ್, ಸುನಿಲ್​ಗೆ ವಾರ್ನ್ ಮಾಡಿದ್ದ.

ಭಜರಂಗದಳ ಕಾರ್ಯಕರ್ತ ಸುನಿಲ್ ಈ ಹಿಂದೆ ಸಮೀರ್ ತಂಗಿಯ ಫೋನ್​ ನಂಬರ್ ಕೇಳಿದ್ದ. ಇದು ಸಮೀರ್ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ 2-3 ಬಾರಿ ಸಮೀರ್ ಎಚ್ಚರಿಕೆಯನ್ನೂ ನೀಡಿದ್ದ. ದಾಳಿ ನಡೆದ ದಿನವೂ ಸುನಿಲ್ ಮತ್ತು ಸಮೀರ್ ಬಯ್ದಾಡಿಕೊಂಡಿದ್ದಾರೆ.

ಸಮೀರ್ ಮೇಕೆಗೆ ಹುಲ್ಲು ತರಲು ಹೊರಟಿದ್ದ. ಹೀಗಾಗಿ ಮಚ್ಚು ಇಟ್ಟುಕೊಂಡಿದ್ದ. ಇದೇ ಮಚ್ಚಿನಿಂದ ಸುನಿಲ್ ಮೇಲೆ ಹಲ್ಲೆಯಾಗಿದೆ ಎಂದು ಜಿಲ್ಲಾ ಎಸ್​ಪಿ ಜಿ.ಕೆ.ಮಿಥುನ್ ಮಾಹಿತಿ ನೀಡಿದ್ದಾರೆ.

ದಾಳಿಯ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬೇರೆ ಯಾರಾದರೂ ಪ್ರಕರಣದಲ್ಲಿ ಇದ್ದಾರೆಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸಿರುವ ಕಾಲ್ ರೆಕಾರ್ಡ್ಸ್ ಲಭ್ಯವಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಸ್​​ಪಿ ಜಿ.ಕೆ.ಮಿಥುನ್ ಹೇಳಿದ್ದಾರೆ.

ಸಾಗರ ನಗರದ ಬಿ.ಎಚ್​.ರಸ್ತೆಯ ಬಸ್ ನಿಲ್ದಾಣ ಬಳಿ ಬಜರಂಗದಳ ಕಾರ್ಯಕರ್ತ ಸುನೀಲ್ ಮೇಲೆ ಸಮೀರ್ ಮಚ್ಚು ಬೀಸಿದ್ದು, ಅದೃಷ್ಟವಶಾತ್​ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಸುನೀಲ್ ಪಾರಾಗಿದ್ದ. ದಾಳಿಗೆ ಯತ್ನಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net