ಊಟ ಆರ್ಡರ್​ ಮಾಡಿದವನಿಗೆ ಮೂತ್ರ ಗಿಫ್ಟ್​ ಕೊಟ್ಟ ಡೆಲಿವರಿ ಬಾಯ್​!

urine
Published on

ಲಂಡನ್​: ಆನ್​ಲೈನ್​ನಲ್ಲಿ ಊಟ ಆರ್ಡರ್​ ಮಾಡಿದಾಗ ಅದು ಮಿಸ್​ ಆಗುವುದು ಅಥವಾ ಆರ್ಡರ್​​ ಮಾಡಿದ ಊಟದ ಬದಲು ಬೇರೇನೋ ಬರುವುದೆಲ್ಲ ಸಾಮಾನ್ಯವಾಗಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ್ದಕ್ಕೆ ಬಂದಿದ್ದೇನೆ ಎಂದು ತಿಳಿದರೆ ನೀವು ಗಾಬರಿ ಆಗಿಬಿಡುತ್ತೀರಿ.

ಲಂಡನ್​ನ ಆಲಿವರ್ ಮೆಕ್‌ಮ್ಯಾನಸ್ ಹೆಸರಿನ ವ್ಯಕ್ತಿ ಇತ್ತೀಚೆಗೆ ಆನ್​ಲೈನ್​ನಲ್ಲಿ ಫುಡ್​ ಆರ್ಡರ್​ ಮಾಡಿದ್ದ. ಆತನ ಆರ್ಡರ್​ ಮಾಡಿದ್ದ ಫುಡ್​ ಕೆಲ ಹೊತ್ತಿನಲ್ಲಿ ಆತನಿಗೆ ಬಂದು ತಲುಪಿದೆ. ಆದರೆ ಅದನ್ನು ತೆರೆದು ನೋಡಿದ ಆತನಿಗೆ ಆಘಾತವಾಗಿದೆ. ಊಟದ ಜತೆಯಲ್ಲಿ ಒಂದು ಮೂತ್ರ ತುಂಬಿರುವ ಬಾಟೆಲ್​ ಕೂಡ ಬಂದಿದೆ. ಅದನ್ನು ಕಂಡ ಆತ ಗಾಬರಿಗೊಂಡಿದ್ದು ಈ ವಿಚಾರವಾಗಿ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾನೆ.

ಈ ವಿಚಾರ ತಿಳಿಯುತ್ತಿದ್ದಂತೆ ಆನ್​ಲೈನ್​ ಫುಡ್​ ಡೆಲಿವರಿ ಸಂಸ್ಥೆ ಕ್ಷಮೆಯಾಚಿಸಿದೆ. ಆತ ಊಟ ಆರ್ಡರ್​ ಮಾಡಿದ್ದ ಹೋಟೆಲ್​ನಲ್ಲಿ ಕುಡಿಯುವುದಕ್ಕೆ ಯಾವುದೇ ಪಾನೀಯ ಲಭ್ಯವಿಲ್ಲದಿದ್ದು, ಈ ಕೆಲಸವನ್ನು ಡೆಲಿವರಿ ಬಾಯ್​ ಮಾಡಿರಬೇಕು ಎನ್ನಲಾಗಿದೆ. ಊಟದ ಪಾರ್ಸೆಲ್​ ಬಂದಿದ್ದ ಪ್ಯಾಕೆಟ್​ ಸರಿಯಾಗಿ ಮುಚ್ಚಿರಲಿಲ್ಲ ಎಂದು ಮೆಕ್‌ಮ್ಯಾನಸ್ ತಿಳಿಸಿದ್ದಾನೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net