

ಬೆಂಗಳೂರು: ಹಾವು ಎಂದರೆ ಹೆದರಿ ಓಡುವವರು ಸಾಕಷ್ಟು ಮಂದಿಯಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ಡಿಫರೆಂಟ್. ಹಾವೆಂದರೆ ಹೆದರೋದು ದೂರವಿರಲಿ, ಆ ಹಾವನ್ನೇ ಹಿಡಿದುಕೊಂಡು ತನ್ನ ಮೂಗಿನೊಳಗೆ ಹಾಕಿ ಅದನ್ನು ಬಾಯಿಯಿಂದ ತೆಗೆದುಬಿಡುತ್ತಾನೆ.
ಇಂತದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೃದ್ಧನೊಬ್ಬ ಸಣ್ಣದೊಂದು ಹಾವನ್ನು ತನ್ನ ಮೂಗಿನ ಬಲ ರಂಧ್ರದೊಳಗೆ ಹಾಕುತ್ತಾನೆ. ಹಾಗೆಯೇ ನಿಧಾನವಾಗಿ ಹಾವನ್ನು ನೂಕುತ್ತಾ ತನ್ನ ಬಾಯಿಯೊಳಗೆ ಕೈ ಹಾಕುತ್ತಾನೆ. ಬಾಯಿಯಿಂದ ಹಾವಿನ ತಲೆಯನ್ನು ಹಿಡಿದು ಹೊರಗೆ ತೆಗೆಯುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅಂದ ಹಾಗೆ ಈ ವಿಡಿಯೋವನ್ನು ಬಾಲಿವುಡ್ ನಟ ವಿದ್ಯಾತ್ ಜಮ್ವಾಲ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಿಲಿಯನ್ಗಟ್ಟಲೆ ಜನರು ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅನೇಕರು ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೆ ಹಲವರು ನಟನಿಗೆ ಬೈಯಲಾರಂಭಿಸಿದ್ದಾರೆ. ನಿಮ್ಮ ಖಾತೆಯಲ್ಲಿ ಇಂಥ ವಿಡಿಯೋವನ್ನು ನಾವು ನಿರೀಕ್ಷಿಸಿರಲಿಲ್ಲ ಎನ್ನಲಾರಂಭಿಸಿದ್ದಾರೆ. ಇನ್ನು ಕೆಲವರು ಇದು ಪ್ರಾಣಿಹಿಂಸೆ ಎಂದು ದೂರಿದ್ದಾರೆ. (ಏಜೆನ್ಸೀಸ್)