More

    ವೈದ್ಯನ ಸೋಗು ಹಾಕಿ ರೋಗಿಗಳನ್ನು ದೋಚುತ್ತಿದ್ದ… 10 ವರ್ಷದಿಂದ ಇದೇ ಅವನ ಕೆಲಸ !

    ಪುಣೆ: ಹತ್ತು ವರ್ಷಗಳಿಂದ ವೈದ್ಯನಂತೆ ಸೋಗು ಹಾಕಿ ರೋಗಿಗಳಿಗೆ ಟೋಪಿ ಹಾಕುತ್ತಿದ್ದ ಖದೀಮನೊಬ್ಬನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ತನ್ನನ್ನು ತಾನೇ ಡಾ.ದೇಶಪಾಂಡೆ ಅಥವಾ ಡಾ.ಕುಲಕರ್ಣಿ ಎಂದು ಕರೆದುಕೊಂಡು ದುಬಾರಿ ಔಷಧವನ್ನು ಕಡಿಮೆ ಬೆಲೆಯಲ್ಲಿ ಒದಗಿಸುವುದಾಗಿ ಹೇಳಿ ಸಾವಿರಾರು ರೂಪಾಯಿ ದೋಚುತ್ತಿದ್ದವ ಸಿಕ್ಕಿಹಾಕಿಕೊಂಡಿದ್ದಾನೆ.

    ಜನವರಿ ತಿಂಗಳಲ್ಲಿ ಡಾ.ದೇಶಪಾಂಡೆ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಪುಣೆಯ ಸಸ್ಸೂನ್ ಜನರಲ್ ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಕರೆ ಮಾಡಿ ಸ್ಥಳೀಯವಾಗಿ ದೊರಕದ ಇಂಜೆಕ್ಷನ್​ಗಳನ್ನು ತರಿಸುವುದಾಗಿ ಹೇಳಿ ಹಣಪಡೆದಿದ್ದ. ಹೀಗೆ ಒಂದು ದಂಪತಿಯಿಂದ 7 ಸಾವಿರ ರೂಪಾಯಿ, ಮತ್ತೊಬ್ಬ ರೋಗಿಯಿಂದ 20 ಸಾವಿರ ಪಡೆದು ಮಾಯವಾಗಿದ್ದ ಹಿನ್ನೆಲೆಯಲ್ಲಿ ಪುಣೆಯ ಬುಂದ್​ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು. ದೂರವಾಣಿ ಕರೆಗಳನ್ನು ವಿಶ್ಲೇಷಿಸಿದಾಗ ಪೊಲೀಸರಿಗೆ ನಗರದ ನವಿ ಪೇಟೆ ನಿವಾಸಿ 34 ವರ್ಷದ ಅಮಿತ್ ಕಾಂಬ್ಳೆ ಎಂಬುವ ಈ ಕೃತ್ಯ ಮಾಡಿದ್ದು ತಿಳಿಯಿತು.

    ಇದನ್ನೂ ಓದಿ: ತಾಯಿಯ ಶವವನ್ನು 10 ವರ್ಷ ಬಚ್ಚಿಟ್ಟಳು…! ಕಾರಣ ಕೇಳಿದರೆ ಮನ ಕಲುಕುತ್ತೆ…

    ಆತನನ್ನು ಬಂಧಿಸಿ ತನಿಖೆ ನಡೆಸಿದಾಗ 2010 ರಿಂದ ಇದೇ ರೀತಿ ರೋಗಿಗಳನ್ನು, ರೋಗಿಗಳ ಸಂಬಂಧಿಕರನ್ನು ವಂಚಿಸುತ್ತಿದ್ದ ಎಂಬುದು ಬೆಳಕಿಗೆ ಬಂತು. ತುರ್ತಾಗಿ ಇಂಜೆಕ್ಷನ್​ಗಳು ಬೇಕಾಗಿದ್ದು, ಅವನ್ನು ಕಡಿಮೆ ಬೆಲೆಯಲ್ಲಿ ತರಿಸಿಕೊಡುವುದಾಗಿ ರೋಗಿಗಳಿಗೆ ಹೇಳಿ ವಂಚಿಸಿದ 21 ಪ್ರಕರಣಗಳು ನಡೆದಿವೆ. ಇಂಥ ಪ್ರಕರಣವೊಂದರಲ್ಲಿ 2017 ನೇ ಇಸವಿಯಲ್ಲಿ ಒಮ್ಮೆ ಈತ ಬಂಧನಕ್ಕೊಳಗಾಗಿ ಕೆಲಸ ನಿಲ್ಲಿಸಿದ್ದ. ಆದರೆ ಇತ್ತೀಚೆಗೆ ಮತ್ತೆ ಹಳೇ ಚಾಳಿ ಶುರು ಮಾಡಿಕೊಂಡಿದ್ದ ಎಂದು ಇನ್ಸ್​ಪೆಕ್ಟರ್ ಯಶವಂತ್ ಗವಾರಿ ತಿಳಿಸಿದ್ದಾರೆ.

    “ಡಾ.ದೇಶಪಾಂಡೆ ಅಥವಾ ಡಾ.ಕುಲಕರ್ಣಿ ಎಂಬ ಹೆಸರಲ್ಲಿ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಇಲ್ಲವೇ ಸಂಬಂಧಿಕರನ್ನು ವಂಚಿಸಿದ್ದಾನೆ. ಅವನು ಹೇಗೆ ರೋಗಿಗಳ, ಅವರ ಸಂಬಂಧಿಕರ ದೂರವಾಣಿ ಸಂಖ್ಯೆಗಳನ್ನು ಪಡೆದುಕೊಳ್ಳುತ್ತಿದ್ದ ಎಂಬುದನ್ನು ಪರಿಶೀಲಿಸಲಾಗುತ್ತಿದೆ” ಎಂದು ತನಿಖಾಧಿಕಾರಿ ಸಬ್ ಇನ್ಸ್​ಪೆಕ್ಟರ್ ರಾಮಕೃಷ್ಣ ದಾಳ್ವಿ ತಿಳಿಸಿದ್ದಾರೆ.

    ಇದನ್ನೂ ಓದಿ: 14 ತಿಂಗಳಿಂದ ಕಾಣೆಯಾಗಿದ್ದವ ಬಾವಿಯಲ್ಲಿ ಪ್ರತ್ಯಕ್ಷನಾದ !

    ಬಂಧನಕ್ಕೊಳಗಾಗುವ ಮುಂಚೆ ಸಸ್ಸೂನ್ ಜನರಲ್ ಆಸ್ಪತ್ರೆಯ ಹಿರಿಯ ವೈದ್ಯರ ಮುಂದೆ ತಾನು ರೋಗಿಗಳಿಗೆ ಹೇಗೆ ಮೋಸ ಮಾಡುತ್ತಿದ್ದನೆಂದು ಆತ ಡೆಮಾನ್ಸ್​ಟ್ರೇಷನ್​ ನೀಡಿದ ಎನ್ನಲಾಗಿದೆ! ವಿಚಾರಣೆ ವೇಳೆಯಲ್ಲಿ ತಾನು ಗಂಭೀರ ರೋಗದಿಂದ ಬಳಲುತ್ತಿದ್ದು, ಅದರ ಚಿಕಿತ್ಸೆಗಾಗಿ ಈ ರೀತಿ ಹಣ ಸಂಪಾದಿಸುತ್ತಿರುವುದಾಗಿ ಆರೋಪಿ ಹೇಳಿಕೊಂಡಿದ್ದಾನೆ. ಆದರೆ ಅದರ ಸತ್ಯಾಸತ್ಯತೆ ಇನ್ನೂ ಹೊರಬಿದ್ದಿಲ್ಲ.(ಏಜೆನ್ಸೀಸ್)

    ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

    ಮದುವೆಯಾಗಲು ಹೆಣ್ಣಿಗೊಂದು ಗಂಡಿಗೊಂದು ವಯಸ್ಸೇಕೆ ? ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಕೀಲರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts