More

    ಅಮೆರಿಕದಲ್ಲಿ ನೆಲಕ್ಕುರುಳಿತು ಗಾಂಧಿ ಪ್ರತಿಮೆ: ಮುಖ, ಪಾದ ತುಂಡರಿಸಿದ ದುಷ್ಕರ್ಮಿಗಳು

    ಕ್ಯಾಲಿಫೋರ್ನಿಯಾ: ಇತ್ತ ಭಾರತದಲ್ಲಿ ಕೆಂಪುಕೋಟೆಯಿಂದ ರಾಷ್ಟ್ರಧ್ವಜವನ್ನು ಇಳಿಸಿ ಅವಮಾನ ಮಾಡಿದ್ದರೆ, ಅತ್ತ ಅಮೆರಿಕದಲ್ಲಿ ಸಾರ್ವಜನಿಕ ಪಾರ್ಕೊಂದರಲ್ಲಿದ್ದ ಅಹಿಂಸೆಯ ಪ್ರತಿಪಾದಕ ಗಾಂಧಿ ಪ್ರತಿಮೆಯನ್ನು ಹಾಳುಗೆಡವಿರುವ ಘಟನೆ ನಡೆದಿದೆ.

    ಉತ್ತರ ಕ್ಯಾಲಿಫೋರ್ನಿಯಾದ ಡೇವಿಸ್ ನಗರದ ಸೆಂಟ್ರಲ್ ಪಾರ್ಕ್​ನಲ್ಲಿ ಗಾಂಧೀಜಿಯ ಆರು ಅಡಿ ಎತ್ತರದ 294 ಕೆಜಿ ತೂಕದ ಬ್ರಾಂಜ್ ಪ್ರತಿಮೆಯಿತ್ತು. ಜನವರಿ 27 ರ ಬೆಳಗಿನ ಜಾವ ಪ್ರತಿಮೆಯ ಅರ್ಧ ಮುಖವನ್ನು ಮತ್ತು ಪಾದಗಳನ್ನು ಕತ್ತರಿಸಿ ತೆಗೆದಿದ್ದು, ಪ್ರತಿಮೆಯನ್ನು ನೆಲಕ್ಕುರುಳಿಸಿರುವುದು ಕಂಡುಬಂತು. ಈ ಹೇಯ ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳನ್ನು ಹುಡುಕಲು ಡೇವಿಸ್​ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ಈ ಪ್ರತಿಮೆಯನ್ನು ಭಾರತ ಸರ್ಕಾರವು ಡೇವಿಸ್ ನಗರ ಆಡಳಿತಕ್ಕೆ ಉಡುಗೊರೆಯಾಗಿ ನೀಡಿತ್ತು. ಆಗ ಈ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ಕೆಲವು ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದಾಗ್ಯೂ ಸಿಟಿ ಕೌನ್ಸಿಲ್ ಪ್ರತಿಮೆಯನ್ನು ಸ್ಥಾಪಿಸುವ ಪರವಾಗಿ ನಿರ್ಧಾರ ತೆಗೆದುಕೊಂಡಿತ್ತು ಎನ್ನಲಾಗಿದೆ.

    ಭಾರತದ ಹೆಮ್ಮೆಯ ಪ್ರತೀಕಕ್ಕೆ ಧಕ್ಕೆ ತಂದಿರುವ ಈ ಕೃತ್ಯದ ಬಗ್ಗೆ ಭಾರತೀಯ ಅಮೆರಿಕನ್ನರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್​ನ್ಯಾಷನಲ್ ಮತ್ತು ಹಿಂದೂ ಅಮೇರಿಕನ್ ಫೌಡೇಶನ್ ಈ ಕೃತ್ಯವನ್ನು ಖಂಡಿಸಿದೆ.

    ಇದನ್ನು ಭಾರತೀಯ ಅಮೇರಿಕನ್ನರ ವಿರುದ್ಧದ ದ್ವೇಷದ ಅಪರಾಧ ಎಂದು ಪರಿಗಣಿಸಿ, ಹೋಮ್​ಲ್ಯಾಂಡ್​ ಸೆಕ್ಯುರಿಟಿ ಇಲಾಖೆ ಮತ್ತು ಎಫ್​ಬಿಐ ತನಿಖೆ ನಡೆಸಬೇಕಾಗಿ ಸಂಘಟನೆಯ ಸದಸ್ಯರು ಕೋರಿದ್ದಾರೆ. ಈ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    VIDEO: ಕರ್ತವ್ಯದ ಹೊತ್ತಲ್ಲೇ ಸಿಸಿಬಿ ಪೊಲೀಸರ ಗುಂಡು ಪಾರ್ಟಿ- ವಿಡಿಯೋ ವೈರಲ್​

    ಪ್ರತಿಭಟನೆ ಹೆಸರಲ್ಲಿ ನಡೆದ ಹಿಂಸಾಚಾರದ ನಂತರ ಸ್ಫೋಟಿಸಿದ್ದು ನಾವೇ ಎಂದು ಒಪ್ಪಿಕೊಂಡ ಜೈಷ್​ ಸಂಘಟನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts